ಶನಿವಾರ, ಸೆಪ್ಟೆಂಬರ್ 25, 2021
22 °C

50 ವರ್ಷಗಳ ಹಿಂದೆ ಮಂಗಳವಾರ 17.8.1971

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಪಮೌಲ್ಯದ ಅಂಚಿನಲ್ಲಿ ಡಾಲರ್

ವಾಷಿಂಗ್ಟನ್, ಆ. 16– ಅಧ್ಯಕ್ಷ ನಿಕ್ಸನರು ಡಾಲರನ್ನು ಚಿನ್ನಕ್ಕೆ ವಿನಿಯಮ ಮಾಡಿಕೊಳ್ಳುವ ಅಮೆರಿಕದ 37 ವರ್ಷಗಳ ಹಳೆಯ ಆಶ್ವಾಸನೆಯನ್ನು ರದ್ದುಪಡಿಸಿ, ಡಾಲರಿನ ಮೌಲ್ಯಚ್ಛೇದನಕ್ಕೆ ಎಡೆಕೊಡುವ ಹೊಸ ನೀತಿಯನ್ನು ಪ್ರಕಟಿಸಿದ್ದಾರೆ.

ವಿಶ್ವದ ಇತರ ರಾಷ್ಟ್ರಗಳ ನಾಣ್ಯದ ಪುನರ್ ಹೊಂದಾಣಿಗೆ ಸಂಧಾನ ಆರಂಭಿ ಸಲು ಅವರು ಹಣಕಾಸು ಖಾತೆಯ ಹಿರಿಯ ಅಧಿಕಾರಿಗಳನ್ನು ಲಂಡನ್ನಿಗೆ ಕಳುಹಿಸಿದ್ದಾರೆ. 

ಅಮೆರಿಕದ ತತ್ತರಿಸುತ್ತಿರುವ ಆರ್ಥಿಕರಂಗಕ್ಕೆ ನವಚೇತನ ನೀಡಲು ನಿನ್ನೆ ರಾತ್ರಿ ನಿಕ್ಸನ್‌ ಪ್ರಕಟಿಸಿದ ಕ್ರಮಗಳಲ್ಲಿ 90 ದಿನಗಳ ವೇತನ ಮತ್ತು ಬೆಲೆ ಸ್ಥಗಿತ, ಅನೇಕ ವಸ್ತುಗಳ ಆಮದು ಮೇಲೆ ಶೇ 10ರಷ್ಟು ಸರ್‌ಚಾರ್ಚ್ ಹೇರಿಕೆ, ವಿದೇಶಿ ಆರ್ಥಿಕ ನೆರವಿನಲ್ಲಿ ಶೇ 10ರಷ್ಟು ಕಡಿತ, ಸರ್ಕಾರಿ ಖರ್ಚುವೆಚ್ಚದಲ್ಲಿ ಖೋತಾ ಮುಂತಾದವು ಅಡಕವಾಗಿದೆ.

ರೂಪಾಯಿಗೆ ಹಾನಿತಟ್ಟದು

ನವದೆಹಲಿ, ಆ. 16– ಡಾಲರ್ ಮೇಲಿನ ಒತ್ತಡವನ್ನು ನಿಲ್ಲಿಸುವ ಬಗ್ಗೆ ಅಮೆರಿಕ ಕೈಗೊಂಡಿರುವ ಆರ್ಥಿಕ ಕ್ರಮಗಳಿಂದ ಉಂಟಾಗುವ ಪರಿಣಾಮವನ್ನು ವಿಶ್ಲೇಷಿಸು ವುದಕ್ಕೆ ಭಾರತ ಸರ್ಕಾರದ ಆರ್ಥಿಕ ಸಲಹೆಗಾರರು ತತ್‌ಕ್ಷಣವೇ ಇಲ್ಲಿ ಸಭೆ ಸೇರುವರೆಂದು ಗೊತ್ತಾಗಿದೆ.

ಅಮೆರಿಕ ಸರ್ಕಾರ ಕೈಗೊಂಡಿರುವ ಆರ್ಥಿಕ ಕ್ರಮಗಳ ವಿಷಯದಲ್ಲಿ ಪ್ರತಿಕ್ರಿಯೆ ವ್ಯಕ್ತಪಡಿಸಲು ಅಧಿಕೃತ ವೃತ್ತಗಳಿಗೆ ಇಚ್ಛೆ ಇಲ್ಲ. ಆದರೆ ಅಮೆರಿಕ ಕ್ರಮದಿಂದ ರೂಪಾಯಿಗೆ ಯಾವುದೇ ಹಾನಿತಟ್ಟುವ ನಿರೀಕ್ಷೆ ಇಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು