ನವದೆಹಲಿ, ಡಿ. 5– ಆಮದು ಲೈಸೆನ್ಸ್ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರ ತನಿಖಾ ಮಂಡಲಿ ಸಲ್ಲಿಸಿರುವ ವರದಿಯನ್ನು ಸಂಸತ್ನ ಉಭಯ ಸದನಗಳ ಅಧ್ಯಕ್ಷರ ಸಮ್ಮುಖದಲ್ಲಿ ವಿರೋಧಿ ನಾಯಕರಿಗೆ ತೋರಿಸಲು ಕೇಂದ್ರ ಸಂಪುಟ ಇಂದು ನಿರ್ಧರಿಸಿತು.

ಆದರೆ, ವರದಿಯ ವಿವರಗಳನ್ನು ತಿಳಿಯಲು ವಿರೋಧಿ ನಾಯಕರು ರಹಸ್ಯ ಪಾಲನೆ ಪ್ರತಿಜ್ಞೆ ಕೈಗೊಳ್ಳಬೇಕೆಂದು ಸರ್ಕಾರ ಷರತ್ತು ಹಾಕಿದೆ.

ಸರ್ಕಾರದ ಈ ಸಲಹೆಯನ್ನು ಪರಿಶೀಲಿಸಲು ವಿರೋಧ ಪಕ್ಷಗಳ ನಾಯಕರು ಕಾಲಾವಕಾಶ ಕೇಳಿದ್ದಾರೆ.

ಬುದ್ಧಿಜೀವಿಗಳ ಜತೆ ಹೆಚ್ಚು ನಿಕಟ ಸಂಬಂಧ: ಕಾಂಗ್ರೆಸ್ಸಿನ ಬಯಕೆ

ಬೆಂಗಳೂರು, ಡಿ. 5– ಬುದ್ಧಿಜೀವಿಗಳಿಂದ ‘ಈವರೆಗೆ ದೂರವಿದ್ದ’ ಕಾಂಗ್ರೆಸ್ ಪಕ್ಷವು ಅವರೊಡನೆ ಹೆಚ್ಚು ಹೆಚ್ಚು ನಿಕಟ ಸಂಬಂಧ ಹೊಂದಲು ಬಯಸಿದೆ.

ದೊಡ್ಡಬಳ್ಳಾಪುರ ಶಿಬಿರದಿಂದ ಹೊರಹೊಮ್ಮಿದ ಅಂಶಗಳಲ್ಲಿ ಇದೊಂದು.

ವಕೀಲರು, ಶಿಕ್ಷಕರು, ವೈದ್ಯರು, ವಿಜ್ಞಾನಿ ಗಳ ವೇದಿಕೆಗಳನ್ನು ಹೊಂದಲು ಆಲೋಚಿಸುತ್ತಿರುವುದಾಗಿ ಕೆಪಿಸಿಸಿ ಅಧ್ಯಕ್ಷ ಶ್ರೀ ಕೆ.ಎಚ್. ಪಾಟೀಲರು ವರದಿಗಾರರಿಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.