ಬೈಕ್ ಅಪಘಾತ: ಮೈಸೂರಿನಲ್ಲಿ ಇಬ್ಬರು ವಿದ್ಯಾರ್ಥಿಗಳ ಸಾವು

ಮೈಸೂರು, ಜ. 30– ಹತೋಟಿ ತಪ್ಪಿದ ಬುಲೆಟ್ ಮೋಟಾರ್ ಬೈಕೊಂದು ರಸ್ತೆಬದಿಯ ಕಾಂಕ್ರೀಟ್ ಫುಟ್ಪಾತ್ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಸತ್ತಿರುವ ಘಟನೆ ನಗರದ ಕೆ.ಆರ್.ಎಸ್. ರಸ್ತೆಯ ಕೇಂದ್ರ ಆಹಾರ ಸಂಶೋಧನಾಲಯದ (ಸಿಎಫ್ಟಿಆರ್ಐ)ಮುಂಭಾಗ ನಿನ್ನೆ ಮಧ್ಯರಾತ್ರಿ ಸಂಭವಿಸಿದೆ.

ಮೈಸೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳಾದ ರಘುನಂದನ್ (22) ಹಾಗೂ ಅವಿನಾಶ್ ಆರ್. ಚಂದ್ರ (22) ಮೃತಪಟ್ಟವರು.

ಮೃತರಾದ ರಘುನಂದನ್ ಹಾಸನ ಬಳಿಯ ಅರಸೀಕೆರೆ ನಿವಾಸಿ ಬಿ.ಎನ್. ಸುಬ್ಬೇಗೌಡರ ಪುತ್ರರಾಗಿದ್ದರೆ, ಸತ್ತ ಇನ್ನೊಬ್ಬ ವಿದ್ಯಾರ್ಥಿ ಅವಿನಾಶ್ ಆರ್. ಚಂದ್ರ ಶಿವಮೊಗ್ಗ ಜಿಲ್ಲೆಯ ಸೊರಬದವರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.