ಬೆಂಗಳೂರು, ಜ. 22– ಇಂದು ಕಲ್ಕತ್ತದಿಂದ ಬೆಂಗಳೂರಿಗೆ ಬಂದ ‘ಏರ್ವೇಸ್ ಇಂಡಿಯಾ’ ವಿಮಾನವೊಂದು ವಿಮಾನ ನಿಲ್ದಾಣದಲ್ಲಿ ಕೆಳಗಿಳಿಯುವಾಗ ನೆಲಕ್ಕೆ ತಾಕಿದ್ದರಿಂದ ಆ ವಿಮಾನಕ್ಕೆ ಸ್ವಲ್ಪ ಜಖಂ ಆಗಿದೆ.

ವಿಮಾನದಲ್ಲಿದ್ದ ಯಾರಿಗೂ ಅಪಾಯವಾಗಿಲ್ಲ. ಮೈಸೂರಿನ ಮಾಜಿ ದಿವಾನರಾದ ಸರ್. ಆರ್ಕಾಟ್ ರಾಮಸ್ವಾಮಿ ಮೊದಲಿಯಾರ್ ಅವರೂ ಈ ವಿಮಾನದಲ್ಲಿದ್ದರು.

ಸಿಂಗಪುರದಲ್ಲಿ ಭಾರತ ಯುವಕರಿಗೆ ಶಿಕ್ಷೆ

ಸಿಂಗಪುರ, ಜ. 22– ‘ಜರ್ಥಾಹರ್ಟೋಗ್ ವ್ಯವಹಾರದ ಬಗ್ಗೆ ಸಿಂಗಪುರ ವಸಾಹತಿನಲ್ಲಿ ಡಿಸೆಂಬರ್ ತಿಂಗಳಲ್ಲಿ ನಡೆದ ದೊಂಬಿಯಲ್ಲಿ ನ್ಯಾಯಬಾಹಿರವಾದ ಸಭೆಯ ಸದಸ್ಯರಾಗಿದ್ದರೆಂದು ಇಬ್ಬರು ಭಾರತೀಯ ಯುವಕರನ್ನು ತುರಂಗವಾಸದ ಶಿಕ್ಷೆಗೆ ಒಳಪಡಿಸಲಾಗಿದೆ.

ರಂಗಸ್ವಾಮಿ ಮತ್ತು ಸಿ. ಕೃಷ್ಣನ್ ಎಂಬ ಇಬ್ಬರು ಯುವಕರಿಗೆ ಕ್ರಮವಾಗಿ ನಾಲ್ಕು ಹಾಗೂ ಮೂರು ತಿಂಗಳ ಕಠಿಣ ಶಿಕ್ಷೆ ವಿಧಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.