ಬೆಂಗಳೂರು, ಫೆ. 27– ಕಾಂಗ್ರೆಸ್ ಸರ್ಕಾರದ ಘೋಷಿತ, ಜನತಾಂತ್ರಿಕ ಹಾಗೂ ಸಮಾಜವಾದಿ ಧ್ಯೇಯಗಳು, ಕಳೆದ ಎರಡು ವರ್ಷಗಳ ಆಡಳಿತದಲ್ಲಿ ಅನಾಥವಾಗಿ, ದೇಶದಲ್ಲಿ ಜನರು ದಂಗೆ ಏಳುವಂಥ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿರೋಧ ಪಕ್ಷದ ನಾಯಕ ಶ್ರೀ ಎಚ್.ಡಿ. ದೇವೇಗೌಡ ಅವರು ಇಂದು ವಿಧಾನಸಭೆಯಲ್ಲಿ ಹೇಳಿದರು.

ಫೆಬ್ರುವರಿ 25ರಂದು ವಿಧಾನಮಂಡಲದ ಸಂಯುಕ್ತ ಅಧಿವೇಶನದಲ್ಲಿ ರಾಜ್ಯಪಾಲರು ಭಾಷಣ ಮಾಡಿದುದಕ್ಕೆ ವಂದನೆ
ಅರ್ಪಿಸುವ ನಿರ್ಣಯವನ್ನು ವಿರೋಧಿಸಿ ಮಾತನಾಡಿದರು.

ರೈಲು ಪ್ರಯಾಣ, ಸಾಗಣೆ ದರದಲ್ಲಿ ಏರಿಕೆ

ನವದೆಹಲಿ, ಫೆ. 27– 1974ನೇ ಸಾಲಿನಲ್ಲಿ 136.38 ಕೋಟಿ ರೂಪಾಯಿಗಳ ಹೆಚ್ಚಿನ ಸಂಪನ್ಮೂಲವನ್ನು ಕಲೆಹಾಕಲು ಎಲ್ಲ ವರ್ಗದ ಪ್ರಯಾಣಿಕರ ದರವನ್ನು ಹೆಚ್ಚಿಸುವುದಾ
ಗಿಯೂ ಹಾಗೂ ಸಾಗಣೆ ದರಗಳನ್ನು ಗಣನೀಯ ಪ್ರಮಾಣದಲ್ಲಿ ಪರಿಷ್ಕರಿಸುವುದಾಗಿಯೂ ರೈಲ್ವೆ ಮಂತ್ರಿ ಶ್ರೀ ಲಲಿತ ನಾರಾಯಣ ಮಿಶ್ರಾ ಅವರು ಇಂದು ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.