ಫಾರೂಕ್ ಹತ್ಯೆಗೆ ವಿಫಲ ಯತ್ನ

ಶ್ರೀನಗರ, ಜ. 14 (ಪಿಟಿಐ)– ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರ ಹತ್ಯೆಗೆ ಇಂದು ಉಗ್ರಗಾಮಿಗಳು ವಿಫಲ ಯತ್ನ ಮಾಡಿದರು.

ಫಾರೂಕ್ ಅವರು ಹಬ್ಬಕಡಲ್ ನಲ್ಲಿ ಝೀಲಂ ನದಿಯ ಮೇಲೆ ಸೇತುವೆ ಉದ್ಘಾಟಿಸಿ ಭಾಷಣ ಮಾಡುತ್ತಿದ್ದಾಗ ಎರಡು ರೈಫಲ್ ಗ್ರೆನೇಡ್ಗಳನ್ನು ಅವರತ್ತ ಹಾರಿಸಲಾಯಿತು. ಒಂದು ಗ್ರೆನೇಡ್ ನದಿಗೆ ಬಿತ್ತು. ಮತ್ತೊಂದು ಸಮಾರಂಭ ಸ್ಥಳದ ಹೊರಗೆ ಸ್ಫೋಟ
ಗೊಂಡಿತು ಎಂದು ಅಧಿಕೃತ ಮೂಲ ಗಳು ತಿಳಿಸಿವೆ. ಈ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ. ಮಧ್ಯಾಹ್ನ ಸುಮಾರು 12.30ರಲ್ಲಿ ಈ ಘಟನೆ ನಡೆಯಿತು. ಈ ದಾಳಿ ನಡೆದ ನಂತರ ಕೆಲಕಾಲ ಕಾರ್ಯಕ್ರಮ ಮುಂದುವರಿಕೆಗೆ ಧಕ್ಕೆಯಾಯಿತು.

ಸಾಗರ: ಇನ್ನೂ ಐದು ಮಕ್ಕಳ ಜೀತಮುಕ್ತಿ

ಸಾಗರ, ಜ. 14– ಸಾಗರ ತಾಲ್ಲೂಕಿನ ಹಸಿರುಮಕ್ಕಿಯಲ್ಲಿ ತಮಿಳು ಬೆಸ್ತ ಕುಟುಂಬಗಳಲ್ಲಿ ಜೀತಕ್ಕಿದ್ದ ಇನ್ನೂ ಐದು ಮಕ್ಕಳನ್ನು ನಿನ್ನೆ ಸಂಜೆ ಜೀತಮುಕ್ತಿಗೊಳಿಸಲಾಗಿದೆ.

ಹಸಿರುಮಕ್ಕಿಯ ಚಿನ್ನತಂಗವೇಲು ಎಂಬಾತನ ಬಳಿ ಜೀತ ಮಾಡುತ್ತಿದ್ದ ತಮಿಳುನಾಡಿನ ಸೇಲಂನ ಕುಮಾರ (18), ಕಾರ್ತಿಕ (16), ಗಣೇಶ ಎಂಬಾತನ ಬಳಿ ಜೀತ ಮಾಡುತ್ತಿದ್ದ ಸೇಲಂನ ಮುತ್ತುಕೃಷ್ಣ (18), ಬೆಂಗಳೂರಿನ ಮೆಜೆಸ್ಟಿಕ್ನ ಮಂಜು (10) ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರಾಮನಗರಂನ ಅಲ್ಲಾಭಕ್ಷ್ (13) ಅವರನ್ನು ರಕ್ಷಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.