ಯುದ್ಧ ಸಲಕರಣೆ: ದೇಶೀಯ ಉತ್ಪಾದನೆಗೆ ಪ್ರಧಾನಿ ಸಲಹೆ

ಬೆಂಗಳೂರು, ನ. 17– ಯುದ್ಧವಿಮಾನಗಳೂ ಸೇರಿದಂತೆ ಸಮರ ಸಲಕರಣೆಗಳ ನಿರ್ಮಾಣದಲ್ಲಿ ವಿದೇಶಿ ತಂತ್ರಜ್ಞಾನದ ಅವಲಂಬನೆ ಆತ್ಮಹತ್ಯಕಾರಿ ನಿಲುವಾದೀತು ಎಂದು ವಿಜ್ಞಾನಿ ಸಮುದಾಯ ಮತ್ತು ತಂತ್ರಜ್ಞರಿಗೆ ಪ್ರಧಾನಿ ಪಿ.ವಿ. ನರಸಿಂಹರಾವ್ ಇಂದು ಇಲ್ಲಿ ಎಚ್ಚರಿಸಿದರು.

ಇಲ್ಲಿನ ಎಚ್‌ಎಎಲ್ ಆವರಣದಲ್ಲಿ ನಿರ್ಮಾಣ ಹಂತದಲ್ಲಿರುವ ಸುಮಾರು 22 ದಶಲಕ್ಷ ಡಾಲರ್ ಅಂದಾಜು ವೆಚ್ಚದ ಹಗುರ ಯುದ್ಧ ವಿಮಾನ ಎಲ್‌ಸಿಎ, ಡಿಡಿ–1ರ ನೆಲಮಟ್ಟದ ಪರೀಕ್ಷಾ ಪ್ರಯೋಗಕ್ಕೆ ಚಾಲನೆ ನೀಡಿ, ಮಾತನಾಡುತ್ತಿದ್ದ ಪ್ರಧಾನಿ ‘ಭಾರತದಲ್ಲಿ ಜಾರಿಗೆ ಬಂದಿರುವ ಉದಾರೀಕರಣ ನೀತಿಯ ಪ್ರಯೋಜನ ಸಮರ ಕ್ಷೇತ್ರದಲ್ಲಿ ಅಗತ್ಯವಿರುವ ತಂತ್ರಜ್ಞಾನದ ಆಮದಿಗೆ ಪ್ರಯೋಜನವಾಗುವುದಿಲ್ಲ ಎನ್ನುವುದನ್ನು ನಮ್ಮ ವಿಜ್ಞಾನಿಗಳು ಮರೆಯಬಾರದು’ ಎಂದು ಕಿವಿಮಾತು ಹೇಳಿದರು.

ಅಯೋಧ್ಯೆ ಪ್ರಕರಣ: ಡಿ. 6ರಿಂದ ವಿಚಾರಣೆ ಪುನರಾರಂಭ

ನವದೆಹಲಿ. ನ. 17 (ಪಿಟಿಐ)– ಅಯೋಧ್ಯೆಯ ವಿವಾದಾತ್ಮಕ ಕಟ್ಟಡವನ್ನು ನಾಶಗೊಳಿಸಿದ ಸಂಬಂಧ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ
ಕಲ್ಯಾಣ್ ಸಿಂಗ್, ಅವರ ಸರ್ಕಾರದ
ಉನ್ನತ ಅಧಿಕಾರಿಗಳು ಹಾಗೂ ಬಿಜೆಪಿ ಮತ್ತು ವಿಎಚ್‌ಪಿ ನಾಯಕರ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಕೈಗೊಳ್ಳುವಂತೆ ಕೋರಿ ಸಲ್ಲಿಸಲಾಗಿರುವದೂರುಗಳ ಮೇಲಿನ ವಿಚಾರಣೆ ಸುಪ್ರೀಂ ಕೋರ್ಟಿನಲ್ಲಿ ಡಿಸೆಂಬರ್ 6ರಂದು ಪುನರಾರಂಭ
ಗೊಳ್ಳುವ ನಿರೀಕ್ಷೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.