ಮಂಗಳವಾರ, ಡಿಸೆಂಬರ್ 1, 2020
26 °C

ಪ್ರಜಾವಾಣಿ 50 ವರ್ಷಗಳ ಹಿಂದೆ: ಸೋಮವಾರ, 16–11–1970

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್ಯಕ್ಕೆ ‘ಕರ್ನಾಟಕ’ ಎಂದು ಹೆಸರಿಡಲು ಒತ್ತಾಯ

ಚಳ್ಳಕೆರೆ, ನ. 15– ಕನ್ನಡ ಸಂಸ್ಕೃತಿ, ಪರಂಪರೆ ಮತ್ತು ಕನ್ನಡಿಗರ ಸರ್ವ ಶಕ್ತಿಯ ಸಂಕೇತವಾದ ‘ಕರ್ನಾಟಕ’ ಎಂಬ ಹೆಸರನ್ನು ರಾಜ್ಯಕ್ಕೆ ಇಡಬೇಕೆಂದು ಚಿತ್ರದುರ್ಗ ಜಿಲ್ಲಾ ಸಂಸ್ಥಾ ಕಾಂಗ್ರೆಸ್‌ ರಾಜಕೀಯ ಸಮ್ಮೇಳನವು ಇಂದು
ಒತ್ತಾಯಪಡಿಸಿತು.

ಸುಂದರವಾಗಿ ಅಲಂಕೃತವಾದ ವಿಶಾಲವಾದ ಬಹದ್ದೂರ್‌ ಮಂಟಪದಲ್ಲಿ ಅಖಿಲ ಭಾರತ ಸಂಸ್ಥಾ ಕಾಂಗ್ರೆಸ್‌ ಅಧ್ಯಕ್ಷ ಎಸ್ಸೆನ್‌ ಸಮ್ಮೇಳನ ಉದ್ಘಾಟಿಸಿದರು. ಇಲ್ಲಿಯ ಎಲ್ಲ ತಾಲ್ಲೂಕು ಕಾಂಗ್ರೆಸ್‌ ಮುಖಂಡರೂ ಅಧ್ಯಕ್ಷರೂ ಭಾಗವಹಿಸಿ
ದ್ದರು. ಡಾ. ಕೆ.ನಾಗಪ್ಪ ಆಳ್ವ, ಮುಖ್ಯಮಂತ್ರಿ ವೀರೇಂದ್ರ ಪಾಟೀಲ್‌, ಸಚಿವರು, ಶಾಸಕರು ಮುಂತಾದವರು ಭಾಗವಹಿಸಿದ್ದರು.

‘ಕಾವೇರಿ ಬಯಲು ಜನತೆಯ ಮರಣಶಾಸನಕ್ಕೆ ಸಹಿ ಹಾಕಲಾರೆ’

ಲಾಲ್‌ಬಹದ್ದೂರ್‌ ಮಂಟಪ, ಚಳ್ಳಕೆರೆ, ನ. 15– ‘ಕಾವೇರಿ ನೀರಿನ ವಿವಾದದಲ್ಲಿ ಯಾವ ಒಪ್ಪಂದಕ್ಕೆ ಸಹಿ ಹಾಕಿದರೂ ಅದು ಕಾವೇರಿ ಬಯಲಿನ ಜನತೆಯ ಮರಣಶಾಸನಕ್ಕೆ ಸಹಿ ಹಾಕಿದಂತೆ’ ಎಂದು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರು ಇಂದು ಇಲ್ಲಿ ಸಾರಿದರು.

ಚಿತ್ರದುರ್ಗ ಜಿಲ್ಲಾ ರಾಜಕೀಯ ಸಮ್ಮೇಳನವನ್ನು ಉದ್ದೇಶಿಸಿ ಭಾಷಣ ಮಾಡಿದ ಶ್ರೀ ವೀರೇಂದ್ರ ಪಾಟೀಲರು, ಕಾವೇರಿ ವಿವಾದವನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು