ಇಂಗ್ಲಿಷ್ ತಂದ ಗೊಂದಲ

ನವದೆಹಲಿ, ನ. 19– ಸಚಿವರೊಬ್ಬರ ಬಗ್ಗೆ ‘ಈ ಮನುಷ್ಯ’ (ದಿಸ್ ಫೆಲೋ) ಎಂದು ಸದಸ್ಯರು ನುಡಿಯಬಹುದೇ? ಇದು ತಪ್ಪು ಎನ್ನುವುದಾದರೆ ಅದಕ್ಕೆ ‘ಪರಭಾಷೆ ಉಚ್ಚಾರಣೆಯಿಂದಾದ ತಪ್ಪು’ ಎಂಬುದೇ ವಿವರಣೆ.

ಇಂದು ರಾಜ್ಯಸಭೆಯಲ್ಲಿ ಆಕಾಶವಾಣಿ ಕುರಿತ ಚರ್ಚೆ ಕಾಲದಲ್ಲಿ ಎಸ್.ಎನ್.ಮಿಶ್ರಾ ಅವರು ಸಚಿವ ಐ.ಕೆ.ಗುಜ್ರಾಲ್ ಅವರ ಬಗ್ಗೆ ‘ದಿಸ್ ಫೆಲೋ’ ಎಂದು ನುಡಿದರು. ಕೂಡಲೇ ಸದಸ್ಯರೊಬ್ಬರು ಈ ಬಗ್ಗೆ ಕ್ರಿಯಾಲೋಪವೆತ್ತಿದರು. ಇದು ತಪ್ಪೇ ಎಂಬ ವಿಚಾರದಲ್ಲಿ ವಾದ, ಪ್ರತಿವಾದ ಆರಂಭವಾಯಿತು.

ಭೂಪೇಷಗುಪ್ತಾ (ಸಿ.ಪಿ.ಐ) ಎದ್ದು ನಿಂತು, ‘ಇಂಗ್ಲಿಷ್ ನಮ್ಮ ರಾಷ್ಟ್ರಭಾಷೆ ಅಲ್ಲದಿರುವುದೇ ಈ ಗೊಂದಲಕ್ಕೆ
ಕಾರಣ. ಆದರೂ ‘ದಿಸ್ ಫೆಲೋ’ ಎಂಬ ಪದ ಪಾರ್ಲಿಮೆಂಟರಿ’ ಎಂದು ವಿವರಿಸಿದಾಗ ಕಹಿ ವಾತಾವರಣ ತಿಳಿಯಾಯಿತು.

ಇಷ್ಟೆಲ್ಲಾ ಗೊಂದಲಕ್ಕೆ ಕಾರಣವಾದ ಇಂಗ್ಲಿಷ್ ಭಾಷೆಯ ಬಳಕೆಯನ್ನು ಸಭೆಯಲ್ಲಿ ನಿಷೇಧಿಸಬೇಕೆಂದು ರಾಜ್ ನಾರಾಯಣ್ ಒತ್ತಾಯಪಡಿಸಿದರು.

ಡಿ.ಡಿ.ಟಿ. ಅಪಾಯ: ಲೋಕಸಭೆಯಲ್ಲಿ ಸದಸ್ಯರ ಎಚ್ಚರಿಕೆ

ನವದೆಹಲಿ, ನ. 19– ಆರೋಗ್ಯಕ್ಕೆ ಅಪಾಯಕಾರಿ ಎಂಬುದು ಇತ್ತೀಚಿನ ಪ್ರಯೋಗ ಮತ್ತು ಪರೀಕ್ಷೆಗಳಿಂದ
ಶ್ರುತಪಟ್ಟಿರುವುದರಿಂದ ಡಿ.ಡಿ.ಟಿ ಬಳಕೆ ವಿರುದ್ಧ ಇಂದು ಲೋಕಸಭೆಯಲ್ಲಿ ಅನೇಕ ಸದಸ್ಯರು ಎಚ್ಚರಿಕೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.