ವಿದೇಶಿ ಬ್ಯಾಂಕುಗಳ ರಾಷ್ಟ್ರೀಕರಣ ಸಲಹೆಗೆ ಲೋಕಸಭೆ ನಕಾರ

ನವದೆಹಲಿ, ಜುಲೈ 30– ಭಾರತದಲ್ಲಿರುವ ವಿದೇಶಿ ಬ್ಯಾಂಕುಗಳನ್ನು ರಾಷ್ಟ್ರೀಕರಿಸಬೇಕೆಂಬ ಸೂಚನೆಯನ್ನು ಲೋಕಸಭೆ ಇಂದು ತಿರಸ್ಕರಿಸಿತು. ಭಾರತದಲ್ಲಿರುವ ಎಲ್ಲ ಬ್ಯಾಂಕುಗಳನ್ನೂ ರಾಷ್ಟ್ರೀಕರಿಸಬೇಕೆಂಬ ಬೇಡಿಕೆಯನ್ನೂ ಸಭೆ ತಳ್ಳಿಹಾಕಿತು.

ಅಪೊಲೊ–11ರ ಚಂದ್ರಸ್ಪರ್ಶದ ಚಿತ್ರಗಳ ಬಿಡುಗಡೆ

ಹೂಸ್ಟನ್, ಜುಲೈ 30– ಅಪೊಲೊ–11ರ ಗಗನಗಾಮಿಗಳು ಚಂದ್ರನ ಮೇಲೆ ಇಳಿದ ಹೆಜ್ಜೆ ಗುರುತುಗಳನ್ನೂ, ಅಲ್ಲಿ ಅವರು ನೆಟ್ಟ ಅಮೆರಿಕನ್ ಧ್ವಜವನ್ನೂ ತೋರಿಸುವ ಮೊದಲ ಚಿತ್ರಗಳು ಹಾಗೂ ಚಲನಚಿತ್ರವನ್ನು ‘ನಾಸಾ’ ಮಂಗಳವಾರ ಬಿಡುಗಡೆ ಮಾಡಿತು. ಚಿತ್ರಗಳಲ್ಲಿ ಚಂದ್ರನ ಮೇಲ್ಮೈಯಲ್ಲಿ ಗಗನಗಾಮಿಗಳು ಬಿಟ್ಟು ಬಂದ ವೈಜ್ಞಾನಿಕ ಉಪಕರಣಗಳೂ ‘ಈಗಲ್’ ಕೋಶದ ನೆರಳೂ ಸ್ಪಷ್ಟವಾಗಿ ಕಾಣಿಸುತ್ತಿವೆ.

ಗೋದಾವರಿಯಲ್ಲಿ ದೋಣಿ ಮಗುಚಿ 50 ಜನರ ಸಾವು

ರಾಜಮಹೇಂದ್ರಿ, ಜುಲೈ 30– ಇಲ್ಲಿಂದ ಮೂವತ್ತು ಮೈಲಿ ದೂರದಲ್ಲಿರುವ ಮಂತುರು ಬಳಿ, ಪ್ರವಾಹ ಬಂದಿರುವ ಗೋದಾವರಿ ನದಿಯಲ್ಲಿ ಮಂಗಳವಾರ ದೋಣಿಯೊಂದು ಮಗುಚಿಕೊಂಡು ಐವತ್ತು ಮಂದಿ ಜಲಸಮಾಧಿಯಾದರೆಂದು ವರದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.