ಲಾಹೋರ್, ಜೂನ್ 5: ಶಾಂತಿ ಮಾತುಕತೆ ಯತ್ನವನ್ನು ಭಾರತ ಬುಡಮೇಲು ಮಾಡುತ್ತಿದೆ ಎಂದು ಆರೋಪಿಸಿರುವ ಪಾಕ್ ಪ್ರಧಾನಿ ನವಾಜ್ ಷರೀಫ್, ಎರಡೂ ದೇಶಗಳ ನಡುವೆ ಯುದ್ಧ ನಡೆಯುವ ಸಂಭವವಿದೆ ಎಂಬ ಎಚ್ಚರಿಕೆಯನ್ನು ಇಂದು ನೀಡಿದರು.

ಎರಡೂ ದೇಶಗಳ ವಿದೇಶಾಂಗ ಸಚಿವರ ನಡುವೆ ನವದೆಹಲಿಯಲ್ಲಿ ಸೋಮವಾರ ಮಾತುಕತೆ ನಡೆಯದು ಎಂಬ ನವದೆಹಲಿಯ ವರದಿಗೆ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಾ ‘ಭಾರತ ಶಾಂತಿ ಮಾತುಕತೆ ನಡೆಸಲು ಗಂಭೀರ ಪ್ರಯತ್ನ ನಡೆಸುತ್ತಿಲ್ಲ’ ಎಂದು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಕಾಶ್ಮೀರವೂ ಸೇರಿದಂತೆ ಬಗೆಹರಿಯದೆ ಉಳಿದಿರುವ ದ್ವಿಪಕ್ಷೀಯ ವಿಷಯಗಳನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕೆಂದು ಎರಡೂ ದೇಶಗಳು ಫೆಬ್ರುವರಿಯಲ್ಲಿ ಮಾಡಿಕೊಂಡ ಒಪ್ಪಂದವನ್ನು ಭಾರತ ಉಲ್ಲಂಘಿಸುತ್ತಿದೆ ಎಂದೂ ಷರೀಫ್ ದೂರಿದರು.

ವಿಮಾನ ನಿಲ್ದಾಣ: ಮುಂದಿನ ತಿಂಗಳು ಕಾರ್ಯಾರಂಭ

ಬೆಂಗಳೂರು, ಜೂನ್ 5: ದೇವನಹಳ್ಳಿ ಬಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಮಾಣ ಕಾರ್ಯ ಬರುವ ಜುಲೈ ಅಂತ್ಯದ ವೇಳೆಗೆ ಪ್ರಾರಂಭವಾಗುವುದು ಖಚಿತ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಅನಂತ ಕುಮಾರ್ ಇಂದು ಇಲ್ಲಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.