ತೆಲುಗುದೇಶಂನ ಬಾಲಯೋಗಿ ಲೋಕಸಭಾಧ್ಯಕ್ಷರಾಗಿ ಆಯ್ಕೆ
ನವದೆಹಲಿ, ಮಾರ್ಚ್ 24– ಆಳುವ ಬಿಜೆಪಿ ಬೆಂಬಲಿಸಿದ ತೆಲುಗು ದೇಶಂನ ಜಿ.ಎಂ.ಸಿ ಬಾಲಯೋಗಿ ಅವರು 12ನೇ ಲೋಕಸಭೆಯ ನೂತನ ಸ್ಪೀಕರ್ ಆಗಿ ಇಂದು ಆಯ್ಕೆಗೊಂಡರು. ಇದರಿಂದಾಗಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಬಿಜೆಪಿ ಸರ್ಕಾರವು ಶುಕ್ರವಾರ ವಿಶ್ವಾಸ ಮತದಲ್ಲಿ ಪಾರಾಗುವುದು
ಖಚಿತವಾದಂತಾಯಿತು.
ಬಿರುಗಾಳಿ 105 ಬಲಿ 500 ಕಣ್ಮರೆ
ಮಿಡ್ನಾಪುರ, ಮಾರ್ಚ್ 24– ಪಶ್ಚಿಮ ಬಂಗಾಳ ಮತ್ತು ಒರಿಸ್ಸಾದ ಗಡಿ ಪ್ರದೇಶವಾದ ಡಾಂಟನ್ ಮತ್ತು ಜಲ್ಷೇವಾರ್ ಪ್ರದೇಶಗಳಲ್ಲಿ ಭಾರಿ ಬಿರುಗಾಳಿಯಿಂದ 105 ಜನರು ಸತ್ತು 500 ಮಂದಿ ನಾಪತ್ತೆಯಾಗಿದ್ದಾರೆ. 1100 ಜನ ತೀವ್ರ ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.