ಮಂಗಳವಾರ, ಅಕ್ಟೋಬರ್ 4, 2022
27 °C

25 ವರ್ಷಗಳ ಹಿಂದೆ| ಭಾನುವಾರ, 7–09–1997

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾನವತೆಯ ಮಹಾಸಾಗರ ಮದರ್‌ ತೆರೇಸಾ ಇನ್ನಿಲ್ಲ

ಕಲ್ಕತ್ತಾ, ಸೆಪ್ಟೆಂಬರ್‌ 6 (ಪಿಟಿಐ)– ಜಗತ್ತಿನ ಲಕ್ಷಾಂತರ ಮಕ್ಕಳಿಗೆ ತಾಯಿಯಾಗಿ, ಅವರ ಬದುಕಿನಲ್ಲಿ ಸುಖ– ಸಂತೋಷ ತಂದುಕೊಟ್ಟ ಮದರ್‌ ತೆರೇಸಾ ಶುಕ್ರವಾರ ರಾತ್ರಿ ಹೃದಯಾ ಘಾತದಿಂದ ನಿಧನರಾದರು. ತೆರೇಸಾ ಅವರು ರಾತ್ರಿ 9.30ರಲ್ಲಿ ತಮ್ಮ ಮನೆಯಲ್ಲಿ ಕೊನೆಯುಸಿರೆಳೆದರು. ಆ ಸಮಯದಲ್ಲಿ ಹಿರಿಯ ಕ್ರೈಸ್ತ ಸನ್ಯಾಸಿನಿಯರು ಅವರ ಪಕ್ಕದಲ್ಲಿದ್ದರು ಎಂದು ‘ಮಿಷನರೀಸ್‌ ಆಫ್‌ ಚಾರಿಟಿ’ಯ ಮೂಲಗಳು ತಿಳಿಸಿವೆ. ಮದರ್‌ ಅವರು ಎದೆನೋವು ಎಂದು ಹೇಳಿದ ತಕ್ಷಣ ವೈದ್ಯರನ್ನು ಕರೆಸಲಾಯಿತು. ಆದರೆ ಕೆಲವೇ ಕ್ಷಣದಲ್ಲಿ ಅವರು ಪ್ರಾಣತ್ಯಾಗ ಮಾಡಿದರು.

ಡಯಾನಾಗೆ ಲಕ್ಷಾಂತರ ಅಭಿಮಾನಿಗಳ ಅಶ್ರುತರ್ಪಣ

ಲಂಡನ್‌, ಸೆಪ್ಟೆಂಬರ್‌ 6 (ಎ.ಪಿ, ರಾಯಿಟರ್ಸ್‌)– ಲಂಡನ್ನಿನ ರಸ್ತೆಗಳಲ್ಲಿ ಸಾಲುಗಟ್ಟಿ ನಿಂತಿರುವ ಲಕ್ಷಾಂತರ ಅಭಿಮಾನಿಗಳ ಅಶ್ರುತರ್ಪಣದ ನಡುವೆ ವೇಲ್ಸ್‌ನ ರಾಜಕುಮಾರಿ ಡಯಾನಾ ಅವರ ಪಾರ್ಥಿವ ಶರೀರದ ಅಂತಿಮಯಾತ್ರೆ ಆರಂಭವಾಯಿತು. ‘ವಿ ಲವ್‌ ಯು ಡಯಾನಾ’, ‘ಬ್ಲೆಸ್‌ ಯು’ ಎಂದು ಕೂಗುತ್ತಿದ್ದ ಜನಸ್ತೋಮ ಡಯಾನಾ ಕಳೇಬರ ಹೊತ್ತ ವಾಹನ ತಮ್ಮ ಮುಂದೆ ಸಾಗುತ್ತಿದ್ದಂತೆ ಹೂಗುಚ್ಛಗಳನ್ನು ಎಸೆಯುತ್ತಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು