ಒಡಕು ಎದುರಿಸಲು ಮುಖ್ಯಮಂತ್ರಿಯ ಸದ್ದಿಲ್ಲದ ಸಿದ್ಧತೆ

ಬೆಂಗಳೂರು, ಡಿ. 3– ಎರಡು ಕಾಂಗ್ರೆಸ್ಗಾಗಿರುವ ಘಟನೆಯಿಂದಾಗಬಹುದಾದ ಪರಿಣಾಮವನ್ನೆದುರಿಸಲು ಗದ್ದಲವಿಲ್ಲದೆ ಸಿದ್ಧರಾಗುತ್ತಿರುವ ರಾಜ್ಯದ ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲ್ ಅವರು ವಿಧಾನಸಭೆಯ ಇಬ್ಬರು ಕಾಂಗ್ರೆಸ್ಸೇತರ ಸದಸ್ಯರು ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದಾರೆಂದು ಇಂದು ಇಲ್ಲಿ ಪ್ರಕಟಿಸಿದರು.

ಬಿಜಾಪುರ ಜಿಲ್ಲೆಯ ಬದಾಮಿ ಕ್ಷೇತ್ರದಿಂದ ಆಯ್ಕೆಯಾಗಿರುವ ಪಕ್ಷೇತರ ಸದಸ್ಯ ಶ್ರೀ ಕೆ.ಎಂ. ಪಟ್ಟಣಶೆಟ್ಟಿ ಹಾಗೂ ರಾಯಚೂರಿನ ದೇವದುರ್ಗ ಕ್ಷೇತ್ರದ ಪಕ್ಷೇತರ ಸದಸ್ಯ ಶ್ರೀ ಸದಾಶಿವಪ್ಪ ಪಾಟೀಲ್ ಅವರುಗಳು ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದಾರೆ.

ಇದರಿಂದಾಗಿ 216 ಮಂದಿ ಸದಸ್ಯರಿರುವ ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯರ ಸಂಖ್ಯೆ 133ರಿಂದ 135ಕ್ಕೇರಿದಂತಾಯಿತು.

ಕೋರ್ಟು ಶುಲ್ಕ ವಿನಾಯಿತಿ- ಗೇಣಿದಾರರಿಗೆ ಸರ್ಕಾರದ ಹೊಸ ವರ್ಷದ ಉಡುಗೊರೆ

ಬೆಂಗಳೂರು, ಡಿ. 3– ಮುಂದಿನ ಜನವರಿ ಒಂದರಿಂದ ಯಾವ ಗೇಣಿದಾರನೂ ಭೂ ಪಂಚಾಯಿತಿ ಮುಂದೆ ಅಥವಾ ನ್ಯಾಯಾಲಯದ ಮುಂದೆ ಹೋಗಲು ಕೋರ್ಟು ಸ್ಟಾಂಪ್ ಶುಲ್ಕವನ್ನುಪಾವತಿ ಮಾಡಬೇಕಾಗಿಲ್ಲ.

ಇಂದು ನಡೆದ ಸಚಿವ ಸಂಪುಟದ ಸಭೆ, ಸ್ಟಾಂಪ್ ಶುಲ್ಕ ಪಾವತಿಯನ್ನು ವಿನಾಯ್ತಿಗೊಳಿಸಲು ನಿರ್ಧರಿಸಿತೆಂದು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರು ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.

ಕೋಮು ಗಲಭೆಗಳನ್ನು ಹತ್ತಿಕ್ಕಲು ಶಕ್ತಿಮೀರಿ ಯತ್ನ: ಚವಾಣ್ ಭರವಸೆ

ನವದೆಹಲಿ, ಡಿ. 3– ಕೋಮು ಗಲಭೆಗಳನ್ನು ಮೂಲೋತ್ಪಾಟನೆಗೊಳಿಸಲು ಸರ್ಕಾರ ಶಕ್ತಿ ಮೀರಿ ಸಕಲ ಕ್ರಮಗಳನ್ನು ಕೈಗೊಳ್ಳುವುದೆಂದು ಕೇಂದ್ರ ಗೃಹ ಸಚಿವ ವೈ.ಬಿ. ಚವಾಣ್ ಅವರು ಇಂದು ಲೋಕಸಭೆಯಲ್ಲಿ ಭರವಸೆ ನೀಡಿದರು.

ದೇಶದಲ್ಲಿನ ಕೋಮು ಪರಿಸ್ಥಿತಿ ಕುರಿತು ಇಂದು ಸುದೀರ್ಘ ಹೇಳಿಕೆ ನೀಡಿ ಚವಾಣರು ಕೊನೆಯಲ್ಲಿ ಈ ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.