ಶುಕ್ರವಾರ, ಮೇ 27, 2022
31 °C

ಪ್ರಜಾವಾಣಿಯಲ್ಲಿ 50 ವರ್ಷಗಳ ಹಿಂದೆ: ಶುಕ್ರವಾರ 7 – 4– 1972

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉನ್ನತ ಮಟ್ಟದಲ್ಲಿ ಭ್ರಷ್ಟಾಚಾರ ಇದ್ದರೆ ಲಂಚ ನಿರ್ಮೂಲನದ ಸೊಲ್ಲು ಅಸಂಬದ್ಧ: ಅರಸು

ಮೈಸೂರು, ಏ. 6– ಪ್ರಜಾತಂತ್ರ ರಾಷ್ಟ್ರದಲ್ಲಿ ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿಗಳು, ಮಂತ್ರಿಗಳು ಮತ್ತು ಅಧಿಕಾರಿಗಳು ನೈತಿಕವಾಗಿ ಉನ್ನತ ಮಟ್ಟದಲ್ಲಿದ್ದು, ಇತರರಿಗೆ ಮೇಲ್ಪಂಕ್ತಿಯಾಗಿರುವುದು ಅಗತ್ಯವೆಂದು ಮುಖ್ಯಮಂತ್ರಿ ಶ್ರೀ ದೇವರಾಜ ಅರಸು ಅವರು ಇಂದು ಇಲ್ಲಿ ತಿಳಿಸಿದರು.

ವಿವಿಧ ರಾಜ್ಯಗಳ ಮುಖ್ಯ ಜಾಗೃತ ಆಯೋಗದ ಅಧಿಕಾರಿಗಳಿಗಾಗಿ ಇಲ್ಲಿ ಏರ್ಪಡಿಸಲಾಗಿರುವ ಶಿಕ್ಷಣ ಕೋರ್ಸ್‌ ಅನ್ನು ಶ್ರೀ ಅರಸು ಅವರು ಉದ್ಘಾಟಿಸಿದರು. 

‘ಪ್ರಜಾತಂತ್ರದಲ್ಲಿ ರಾಜಕಾರಣಿಗಳು, ಮಂತ್ರಿಗಳು ಮತ್ತು ಉನ್ನತ ಅಧಿಕಾರಿಗಳು ಭ್ರಷ್ಟಾಚಾರಿಗಳಾಗಿದ್ದರೆ ಭ್ರಷ್ಟಾಚಾರ ನಿರ್ಮೂಲನದ ಮಾತನ್ನು ಮರೆತುಬಿಡಬೇಕು. ದುರಾಸೆ– ಆಮಿಷ ಮತ್ತು ಲಂಚಗುಳಿತನದ ವಿರುದ್ಧ ಕರ್ತವ್ಯನಿಷ್ಠೆ, ಅಪರಿಗ್ರಹ, ನಿಸ್ವಾರ್ಥ ಬುದ್ಧಿಯ ಆತ್ಮಶಕ್ತಿಯನ್ನು ಬೆಳೆಸಿದರೆ ಮಾತ್ರ ಭ್ರಷ್ಟಾಚಾರವನ್ನು ನಿರೋಧಿಸಲು ಸಾಧ್ಯ’ ಎಂದು ಶ್ರೀ ಅರಸು ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು