ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ 50 ವರ್ಷಗಳ ಹಿಂದೆ| ಶನಿವಾರ 01-04-1972

Last Updated 31 ಮಾರ್ಚ್ 2022, 19:31 IST
ಅಕ್ಷರ ಗಾತ್ರ

ಗ್ರಾಮಾಂತರ ನಿರಾಶ್ರಿತ ವೃದ್ಧರ ವಿಶ್ರಾಂತಿ ವೇತನ ಪಾವತಿಗೆ ಹೊಸ ವ್ಯವಸ್ಥೆ

ಬೆಂಗಳೂರು, ಮಾ.31– ಹಳ್ಳಿಗಳಲ್ಲಿರುವ ನಿರಾಶ್ರಿತ ವೃದ್ಧರು ಸರ್ಕಾರಕ್ಕೆ ವಿಶ್ರಾಂತಿ ವೇತನಕ್ಕಾಗಿ ಅರ್ಜಿ ಹಾಕಬೇಕಾಗಿಲ್ಲ.ಸರ್ಕಾರವೇ ಅಂಥವರನ್ನು ಹುಡುಕಿ ವಿಶ್ರಾಂತಿ ವೇತನ ಕೊಡಲಿದೆ.

ಈ ಹೊಸ ಮಾರ್ಗವನ್ನು ಅನುಸರಿಸುವ ಉದ್ದೇಶವನ್ನು ಇಂದು ಇಲ್ಲಿ ಪ್ರಕಟಿಸಿದ ಕಂದಾಯ ಸಚಿವಎನ್‌. ಹುಚ್ಚಮಾಸ್ತಿಗೌಡ ಅವರು ‘ಕಷ್ಟದಲ್ಲಿರುವವರನ್ನು ನಾವು ಹುಡುಕಿಕೊಂಡು ಹೋಗಬೇಕು’ ಎಂದರು.

ಮೀನಾಕುಮಾರಿ ನಿಧನ

ಮುಂಬೈ, ಮಾ.31– ಲಕ್ಷಾಂತರ ಭಾರತೀಯ ಚಲನಚಿತ್ರ ಪ್ರೇಮಿಗಳ ನೆಚ್ಚಿನ ತಾರೆ ಮೀನಾಕುಮಾರಿ (40) ಅವರು ಇಂದು ಮಧ್ಯಾಹ್ನ ಇಲ್ಲಿನ ಆಸ್ಪತ್ರೆಯಲ್ಲಿ ನಿಧನರಾದರು.

ವರ್ಷದೊಳಗೆ ರೈತರ ಜಮೀನು ಹಕ್ಕು ದಾಖಲೆ ಪಟ್ಟಾಕಾರ್ಯ ಪೂರ್ಣ

ನವದೆಹಲಿ, ಮಾ.31– ಇನ್ನಾರು ತಿಂಗಳಿನಿಂದ ಒಂದು ವರ್ಷದೊಳಗೆ ರಾಜ್ಯದಲ್ಲಿ ರೈತರ ಜಮೀನು ಹಕ್ಕುಗಳ ದಾಖಲೆ ಕಾರ್ಯ ಪೂರ್ಣ, ಪಟ್ಟಾ ಹಾಗೂ ಹಾಲಿ ಇರುವ ಸರಾಠಿ ಜಮೀನು ಹಂಚಿಕೆ ಹಾಗೂ ಭೂ ಸ್ವಾಧೀನ ಪ್ರಕರಣಗಳನ್ನು ತ್ವರಿತಗೊಳಿಸುವ ಭಾರಿ ಉದ್ದೇಶಗಳಿಂದ ಕಂದಾಯ ಸಚಿವ ಎನ್‌. ಹುಚ್ಚ ಮಾಸ್ತಿಗೌಡ ಅವರು ತಮ್ಮ ಕಾರ್ಯವನ್ನು ಆರಂಭಿಸಿದ್ದಾರೆ. ಸರ್ಕಾರದ ಬಳಿ ಇರುವ ಜಮೀನನ್ನು ಭೂ ಹೀನರಿಗೆ ಹಂಚಲು ಖಾಸಗಿ ಸದಸ್ಯರನ್ನೊ ಳಗೊಂಡ ಭೂ ಹಂಚಿಕೆ ಸಮಿತಿಗಳನ್ನು ಮತ್ತೆ ಅಸ್ತಿತ್ವಕ್ಕೆ ಸರ್ಕಾರ ತರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT