ಆದೇಶ ಮಂಡನೆ ತಡೆಗೆ ಉಭಯ ಸದನಗಳಲ್ಲೂ ಯಶಸ್ವೀ ಹೋರಾಟ
ಬೆಂಗಳೂರು, ಮಾ. 20– ಬಿಜಾಪುರ ಮತ್ತು ಕುಲ್ಬುರ್ಗಿ ಜಿಲ್ಲಾ ಸಹಕಾರಿ ಬ್ಯಾಂಕುಗಳ ಅಧಿಕಾರ ಚಲಾವಣೆ ಮೇಲೆ, ಹತೋಟಿ ಪಡೆದುಕೊಂಡು ಸರ್ಕಾರ ಹೊರಡಿಸಿದ ಆದೇಶಗಳಲ್ಲಿ ‘ರಾಜಕೀಯ ದುರುದ್ದೇಶ’ ಕಂಡ ವಿರೋಧ ಪಕ್ಷಗಳು ಇಂದು ವಿಧಾನ ಮಂಡಲದ ಉಭಯ ಸದನಗಳಲ್ಲಿ ಈ ಸಂಬಂಧದಲ್ಲಿ ಆದೇಶ ಮಂಡಿಸಬಯಸಿದ ಸರ್ಕಾರದ ಮೇಲೆ ಬಹುತೇಕ ಮಟ್ಟಿಗೆ ಯಶಸ್ವೀ ಹೋರಾಟ ನಡೆಸಿದುವು.
ಸುಮಾರು ಒಂದೂ ಮುಕ್ಕಾಲು ಗಂಟೆ ಕಾಲ ಗೊಂದಲ, ಚಕಮಕಿ ತಂದ ವಿಧಾನಸಭೆ, ಒಂದು ಗಂಟೆ ಕಾಲ ಮುಂದಕ್ಕೆ ಹೋದ ಅವಧಿಯಲ್ಲಿ ಆದ ಒಪ್ಪಂದದ ಪ್ರಕಾರ ಸೂಚನೆಯ ಮಂಡನೆಯನ್ನು ಮುಂದಕ್ಕೆ ಹಾಕಲು ಸರ್ಕಾರ ಒಪ್ಪಿಕೊಂಡಿತು.
ವಿಧಾನಪರಿಷತ್ತಿನಲ್ಲಿ ಇನ್ನೊಂದು ರೂಪಕ್ಕೆ ತಿರುಗಿದ ಈ ಪ್ರಕರಣದಲ್ಲಿ ಗೊಂದಲದ ನಡುವೆ ಸಹಕಾರ ಸಚಿವರಿಂದ ಸೂಚನೆಯ ಮಂಡನೆ ಆಗಿದೆಯೇ ಇಲ್ಲವೇ ಎಂಬುದೇ ವಿವಾದವಾಗಿ ಬೆಳೆದಾಗ ನಾಳೆ ದಾಖಲೆಗಳನ್ನು ತರಿಸಿ ನೋಡಿ ರೂಲಿಂಗ್ ನೀಡುವುದಾಗಿ ಉಪ ಸಭಾಪತಿಯವರು ಸಭೆಯನ್ನು ಮುಂದಕ್ಕೆ ಹಾಕಿದರು.
ಮಂಚನಬೆಲೆ ಯೋಜನೆಗೆ ಕೇಂದ್ರದ ಅಸ್ತು
ಬೆಂಗಳೂರು, ಮಾ. 20– ಮಂಚನಬೆಲೆ ಯೋಜನೆಗೆ ಕೇಂದ್ರದ ಅನುಮತಿ ದೊರೆತಿದೆಯೆಂದು ಭಾರಿ ನೀರಾವರಿ ರಾಜ್ಯ ಸಚಿವ ಶ್ರೀ ಎಚ್.ಎನ್. ನಂಜೇಗೌಡ ಅವರು ಇಂದು ವಿಧಾನಸಭೆಯಲ್ಲಿ ತಿಳಿಸಿ, ಐದನೇ ಪಂಚವಾರ್ಷಿಕ ಯೋಜನೆ ಅಂತ್ಯದೊಳಗಾಗಿ ಅದನ್ನು ಪೂರ್ಣಗೊಳಿಸಲು ಉದ್ದೇಶಿಸ ಲಾಗಿದೆ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.