ರಾಷ್ಟ್ರದಾದ್ಯಂತ ಧಾನ್ಯದ ಸಗಟು ಪೇಟೆ ಬಂದ್; ಹರತಾಳ ‘ಯಶಸ್ವಿ’
ನವದೆಹಲಿ, ಮಾರ್ಚ್ 21– ಆಹಾರ ಧಾನ್ಯಗಳ ಸಗಟು ವ್ಯಾಪಾರವನ್ನು ಸರ್ಕಾರ ಸ್ವಾಧೀನಪಡಿಸಿಕೊಳ್ಳುವುದರ ವಿರುದ್ಧ ಪ್ರತಿಭಟಿಸಿ ರಾಷ್ಟ್ರದಾದ್ಯಂತ ಆಹಾರಧಾನ್ಯ ಸಗಟು ಪೇಟೆಗಳು ಇಂದು ಒಂದು ದಿನದ ‘ಹರತಾಳ’ ಆಚರಿಸಿದವು.
ಎಲ್ಲ ರಾಜ್ಯಗಳಲ್ಲಿಯೂ ‘ಹರತಾಳ’ ಪೂರ್ಣವಾಗಿತ್ತೆಂದು ಅದಕ್ಕೆ ಕರೆ ಕೊಟ್ಟಿದ್ದ ಅಖಿಲ ಭಾರತ ಆಹಾರಧಾನ್ಯ ವ್ಯಾಪಾರಸ್ಥರ ಸಂಘಗಳ ಫೆಡರೇಷನ್ ಹೇಳಿದೆ.
ರಾಷ್ಟ್ರದ ಅನೇಕ ಕಡೆ ಭಾಗಶಃ ಸಗಟು ವ್ಯಾಪಾರಸ್ಥರು, ಚಿಲ್ಲರೆ ವ್ಯಾಪಾರಸ್ಥರು ಹಾಗೂ ಸಂಬಂಧಪಟ್ಟ ವಸ್ತುಗಳ ವಹಿವಾಟುಗಳವರು ಸಹ ಹರತಾಳಕ್ಕೆ ಸಹಾನುಭೂತಿ ವ್ಯಕ್ತಪಡಿಸಲು ತಮ್ಮ ಅಂಗಡಿಗಳನ್ನು ಮುಚ್ಚಿದ್ದರೆಂದು ಇಲ್ಲಿಗೆ ವರದಿ ಬಂದಿದೆ.
ವಿದ್ಯಾರ್ಥಿಗಳಿಗೆ ಬರದ ಬೇಗೆಯ ಪರಿಚಯ
ಬೆಂಗಳೂರು, ಮಾರ್ಚ್ 21– ಬರದ ಬೇಗೆಯನ್ನು ವಿದ್ಯಾರ್ಥಿಗಳಿಗೆ ಪರಿಚಯ ಮಾಡಿಕೊಡುವ ಉದ್ದೇಶದಿಂದ ವಿದ್ಯಾರ್ಥಿಗಳನ್ನು 21 ದಿನಗಳ ಕಾಲ ಬರದ ಪ್ರದೇಶಗಳಿಗೆ ಕಳುಹಿಸಿಕೊಡಲಾಗುವುದು.
ಶಿಕ್ಷಣ ಸಚಿವ ಶ್ರೀ ಎ.ಆರ್.ಬದರಿನಾರಾಯಣ್ ಅವರು ಈ ವಿಷಯವನ್ನು ಇಂದು ವಿಧಾನಸಭೆಯಲ್ಲಿ ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.