ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ ಈ ದಿನ: ರಾಜಕೀಯ ಪ್ರೇರಿತ ಬಂದ್‌ನಲ್ಲಿ ಭಾಗವಹಿಸದಂತೆ ಅರಸು ಮನವಿ

Published 25 ಜೂನ್ 2023, 23:30 IST
Last Updated 25 ಜೂನ್ 2023, 23:30 IST
ಅಕ್ಷರ ಗಾತ್ರ

ಬಾಂಗ್ಲಾ ಜತೆ ವಿಮರ್ಶೆ ನಂತರ ಭಾರತ– ಪಾಕ್‌ ಸಭೆ ಬಗೆಗೆ ನಿರ್ಧಾರ

ನವದೆಹಲಿ, ಜೂನ್‌ 25– ಯುದ್ಧ ಕೈದಿಗಳು ಹಾಗೂ ಪಾಕಿಸ್ತಾನದಲ್ಲಿ ನಿರ್ಬಂಧಕ್ಕೆ ಸಿಕ್ಕಿಬಿದ್ದಿರುವ ಬಂಗಾಳಿಗಳು ಮತ್ತು ಬಾಂಗ್ಲಾ ದೇಶದಲ್ಲಿ ಉಳದು ಹೋಗಿರುವ ಪಾಕಿಸ್ತಾನಿಗಳ ಸ್ವದೇಶ ರವಾನೆ ಕುರಿತು ಏಪ್ರಿಲ್‌ 17ರಂದು ಭಾರತ– ಬಾಂಗ್ಲಾದೇಶ ಸಂಯುಕ್ತ ಹೇಳಿಕೆಯಲ್ಲಿ ಸೂಚಿಸಿರುವ ಸಲಹೆಗಳ ಬಗೆಗೆ ಪಾಕಿಸ್ತಾನ ಸರ್ಕಾರ ಭಾರತಕ್ಕೆ ಬರೆದಿರುವ ಈಚಿನ ಪತ್ರದಲ್ಲಿ ಸಂದರ್ಭಕ್ಕೆ ತಕ್ಕಂತೆ ಹೊಂದಿಕೊಳ್ಳುವ ಧೋರಣೆ ತಳೆದಿದೆಯೆಂದು ಗೊತ್ತಾಗಿದೆ.

ಪಾಕಿಸ್ತಾನ ವಿದೇಶಾಂಗ ಸಚಿವ ಅಜೀಜ್‌ ಅಹಮದ್‌ ವಿದೇಶಾಂಗ ಸಚಿವ ಸ್ವರಣ್‌ ಸಿಂಗ್‌ ಅವರಿಗೆ ಬರೆದಿರುವ ಪತ್ರ ಇಲ್ಲಿಗೆ ಶನಿವಾರ ತಲುಪಿದೆ.

ರಾಜಕೀಯ ಉದ್ದೇಶದ ಬಂದ್‌ನಲ್ಲಿ ಭಾಗವಹಿಸದಿರಲು ಕಾರ್ಮಿಕರಿಗೆ ಅರಸು ಮನವಿ

ಬೆಂಗಳೂರು, ಜೂನ್‌ 25– ‘ರಾಜಕೀಯ ಉದ್ದೇಶದಿಂದ’ ಜೂನ್ 30ರಂದು ನಗರದಲ್ಲಿ ಕೆಲ ಕಾರ್ಮಿಕ ವರ್ಗ ಆಚರಿಸಬೇಕೆಂದಿರುವ ‘ಬಂದ್‌’ನಲ್ಲಿ ಭಾಗವಹಿಸಬಾರದೆಂದು ಮುಖ್ಯಮಂತ್ರಿ ಶ್ರೀ ಡಿ. ದೇವರಾಜ ಅರಸು ಅವರು ನಗರದ ಜನರನ್ನು ಪ್ರಾರ್ಥಿಸಿದರು.

ಬೆಲೆ ಏರಿಕೆ ಕಾರಣ, ಅದರ ವಾಸ್ತವಿಕ ಪರಿಸ್ಥಿತಿ, ಜನರು ಕೈಗೊಳ್ಳಬೇಕಾದ ಕ್ರಮ ಮುಂತಾದವುಗಳ ಬಗ್ಗೆ ಕಮ್ಯುನಿಸ್ಟರು ಜನರನ್ನು ‘ತಪ್ಪು ದಾರಿಗೆ’ ಎಳೆಯುತ್ತಿದ್ದಾರೆಂದೂ ಆಪಾದಿಸಿದರು.

ಅವಶ್ಯ ವಸ್ತುಗಳ ಹಂಚಿಕೆಯ ಹೊಣೆಯನ್ನು ಜನರು ಹಾಗೂ ಕಾರ್ಮಿಕರ ಸಹಕಾರ ಸಂಘಗಳಿಗೆ ವಹಿಸಲು ಸರ್ಕಾರ ಸಿದ್ಧವಿದೆಯೆಂದು ಮುಖ್ಯಮಂತ್ರಿಗಳು ಘೋಷಿಸಿ, ಈ ಬಗ್ಗೆ ಜನ ಹಾಗೂ ಕಾರ್ಮಿಕರು ಆಸಕ್ತಿ ವಹಿಸಬೇಕೆಂದು ಒತ್ತಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT