ವಿದ್ಯಾರ್ಥಿಗಳ ಮುಷ್ಕರಕ್ಕೆ ಯಾವ ಕಾರಣವೂ ಇಲ್ಲ: ತುಕೋಳ್ ವಿವರಣೆ

ಬೆಂಗಳೂರು, ಸೆ.18– ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮುಷ್ಕರ ಹೂಡಲು ‘ಯಾವ ಕಾರಣವೂ’ ಇಲ್ಲವೆಂದು ಉಪಕುಲಪತಿ ಟಿ.ಕೆ.ತುಕೋಳ್ ಅವರು ಇಂದು ವರದಿಗಾರರಿಗೆ ತಿಳಿಸಿದರು.

ವಿದ್ಯಾರ್ಥಿ ನಾಯಕರು ತಿಳಿಸಿರುವ ‘ಕುಂದುಕೊರತೆಗಳಲ್ಲಿ’ ಬಹುಭಾಗ ವಿದ್ಯಾರ್ಥಿಗಳಿಗೆ ಸಂಬಂಧಪಟ್ಟವಲ್ಲವೆಂದು ಅಭಿಪ್ರಾಯಪಟ್ಟರು.

ಕೆಲ ದಿನಗಳ ಹಿಂದೆ ಕೆಲ ವಿದ್ಯಾರ್ಥಿ ನಾಯಕರು ತಮ್ಮನ್ನು ಭೇಟಿ ಮಾಡಿದಾಗ ‘ಕ್ಯಾರಿ ಓವರ್ ಪದ್ಧತಿ ಹಾಗೂ ನಾಲ್ಕು ಮಂದಿ ವಿದ್ಯಾರ್ಥಿಗಳ ಫಲಿತಾಂಶ ಬದಲಾವಣೆ ವಿಷಯಗಳನ್ನು ಮಾತ್ರ ಚರ್ಚಿಸಿದರು. ಕ್ಯಾರಿಓವರ್ ಪದ್ಧತಿಯನ್ನು ಮುಂದುವರಿಸುವುದಾಗಿ ತಿಳಿಸಿದೆ. ಫಲಿತಾಂಶ ಬದಲಾವಣೆಯಾದ ಬಗ್ಗೆ ಹಾಗೂ ಕಾರಣಗಳನ್ನು ವಿವರಿಸಿದೆ. ಎದ್ದು ಹೋಗುವ ಕಾಲದಲ್ಲಿ ಅಧ್ಯಾಪಕ ಶ್ರೀನಿವಾಸ್ ಎಂಬುವರ ವಿಷಯ ಪ್ರಸ್ತಾಪಿಸಿದರು. ಆ ಬಗ್ಗೆಯೂ ವಿವರಿಸಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.