ಸೋಮವಾರ, ಮಾರ್ಚ್ 27, 2023
31 °C

50 ವರ್ಷಗಳ ಹಿಂದೆ| ಗುರುವಾರ 16–9–1971

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿದ್ಯಾರ್ಥಿಗಳ ದೂರು ವಿಚಾರಣೆ ಭರವಸೆ

ಬೆಂಗಳೂರು. ಸೆ. 15– ಬೆಂಗಳೂರು ವಿಶ್ವವಿದ್ಯಾಲಯದ ಆಡಳಿತದ ಬಗ್ಗೆ ಮಾಡಲಾಗಿರುವ ದೂರುಗಳ ಬಗ್ಗೆ ವಿಚಾರಣೆ ನಡೆಸುವ ಭರವಸೆ ನೀಡಿರುವ ರಾಜ್ಯಪಾಲರು, ‘ಮೊದಲು ತರಗತಿಗಳಿಗೆ ಹಿಂತಿರುಗಿ’ ಎಂದು ವಿದ್ಯಾರ್ಥಿಗಳಿಗೆ ಸಲಹೆ ಮಾಡಿದ್ದಾರೆ.

ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ‘ಮುಷ್ಕರ ಮಾರ್ಗವಲ್ಲ’ ಎಂದು ರಾಜ್ಯ ಪಾಲರು ವಿದ್ಯಾರ್ಥಿ ನಾಯಕರಿಗೆ ಒತ್ತಿ ಹೇಳಿದರು. ಪುಂಡತನವನ್ನು ಯಾರೂ ಖಂಡಿ ಸದಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದರು.

‘ವಿದ್ಯಾರ್ಥಿಗಳು ಇದ್ದಕ್ಕಿದ್ದ ಹಾಗೆ ಮುಷ್ಕರ ಹೂಡಬಾರದು. ಸಮಸ್ಯೆಗಳಿಗೆ ಮುಷ್ಕರ ಉತ್ತರವಲ್ಲ ಎಂದು ಹೇಳಿದೆ. ನನ್ನನ್ನಾಗಲೀ, ಉಪಕುಲಪತಿಗಳನ್ನಾಗಲೀ ಭೇಟಿ ಮಾಡಬಹುದಾಗಿತ್ತು. ಅಸ್ಪಷ್ಟ ಆಪಾದನೆಗಳನ್ನು ಮಾಡಿ ಪ್ರಯೋಜನವಿಲ್ಲ. ಅವು ನಿರ್ದಿಷ್ಟವಾಗಿರ
ಬೇಕು ಎಂದು  ಹೇಳಿದೆ’ ಎಂದು ರಾಜ್ಯ ಪಾಲರು ವರದಿಗಾರರಿಗೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು