ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ: ಶುಕ್ರವಾರ 12–11–1971

Last Updated 11 ನವೆಂಬರ್ 2021, 19:30 IST
ಅಕ್ಷರ ಗಾತ್ರ

ಸಂಕೇತ ಸ್ವತ್ತಲ್ಲ

ನವದೆಹಲಿ, ನ. 11– ಕಾಂಗ್ರೆಸ್‌ ಚುನಾವಣೆ ಸಂಕೇತವನ್ನು ಇಬ್ಭಾಗವಾಗಿ ಮಾಡಿ ಒಂದು ಎತ್ತಿನ ಸಂಕೇತವನ್ನು ಒಂದು ಗುಂಪಿಗೂ ಮತ್ತೊಂದನ್ನು ಮತ್ತೊಂದು ಗುಂಪಿಗೂ ಕೊಡಲು ಅವಕಾಶವಿಲ್ಲ.

‘ನೊಗ ಹೊತ್ತು ಜೋಡಿ ಎತ್ತು’ ಸಂಕೇತ ಬಳಕೆಯಿಂದ ತನ್ನನ್ನು ತಪ್ಪಿಸಬಾರದೆಂಬ ಸಂಸ್ಥಾ ಕಾಂಗ್ರೆಸ್ಸಿನ ವಾದವನ್ನು ಸುಪ್ರೀಂ ಕೋರ್ಟ್‌ ನಿರಾಕರಿಸಿ ಇಂದು ಇತ್ತ ತೀರ್ಪಿನಲ್ಲಿ ಈ ಅಂಶವನ್ನು ತಿಳಿಸಿದೆ.ಸಂಕೇತವು ಸಹ ಮಾಲೀಕರ ನಡುವೆ ಹಂಚುವಂತಹ ಆಸ್ತಿಯಲ್ಲ ಎಂದು ಹೇಳಿದೆ. ರಾಜಕೀಯ ಪಕ್ಷವೊಂದು ಇಬ್ಭಾಗವಾಗಿ ಅಥವಾ ಅನೇಕ ಗುಂಪುಗಳಲ್ಲಿ ಒಡೆಯಬಹುದು. ‘ಆದರೆ ಸಂಕೇತವನ್ನು ಒಡೆಯುವಂತಿಲ್ಲ’ ಎಂದಿದೆ.

ರೈಲು ಕಂಬಿ ತಪ್ಪಿ ಸಂಚಾರಕ್ಕೆ ಅಡ್ಡಿ

ಹುಬ್ಬಳ್ಳಿ, ನ. 11– ಇಲ್ಲಿಗೆ ಸುಮಾರು 18 ಕಿ.ಮೀ ದೂರವಿರುದ ಹೆಬ್ಸೂರು ರೈಲ್ವೆ ನಿಲ್ದಾಣದ ಬಳಿ ನಿನ್ನೆ ರಾತ್ರಿ ಗೂಡ್ಸ್‌ ರೈಲಿನ ಎಂಜಿನ್‌ ಮತ್ತು 5 ಬೋಗಿಗಳು ಕಂಬಿ ತಪ್ಪಿ ಉರುಳಿ ಹುಬ್ಬಳ್ಳಿ– ಗದಗ ಮಧ್ಯೆ 8 ಗಂಟೆಗಳಿಗೂ ಹೆಚ್ಚು ಕಾಲ ರೈಲ್ವೆ ಸಂಚಾರಕ್ಕೆ ಅಡ್ಡಿಯಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT