ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿಯಲ್ಲಿ 25 ವರ್ಷಗಳ ಹಿಂದೆ: ಶುಕ್ರವಾರ 17.1.1997

Last Updated 16 ಜನವರಿ 2022, 15:35 IST
ಅಕ್ಷರ ಗಾತ್ರ

ರಾಮನಗರ, ಚಿ.ನಾ.ಹಳ್ಳಿ – ನಾಲ್ಕು ನಾಮಪತ್ರ

ಬೆಂಗಳೂರು, ಜ. 16– ರಾಮನಗರ ಹಾಗೂ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಇದುವರೆಗೆ ನಾಲ್ವರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ದಕ್ಷಿಣ ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ನಡೆಯುವ ಉಪ ಚುನಾವಣೆಗೆ ಇನ್ನೂ ಯಾರೂ ನಾಮಪತ್ರ ಸಲ್ಲಿಸಿಲ್ಲ.

ಪಕ್ಷಗಳ ಲೆಕ್ಕಾಚಾರ: ರಾಮನಗರ ಕ್ಷೇತ್ರದಿಂದ ನಟ ಅಂಬರೀಷ್‌ ಅವರನ್ನು ದಳ ಸ್ಪರ್ಧಿಯಾಗಿ ಕಣಕ್ಕೆ ಇಳಿಸುವ ಸಾಧ್ಯತೆ ಇದೆ. ಪ್ರಧಾನಿ ಎಚ್‌.ಡಿ.ದೇವೇಗೌಡರು ತೆರವು ಮಾಡಿರುವ ಈ ಕ್ಷೇತ್ರಕ್ಕೆ ಅಂತಿಮವಾಗಿ ದೇವೇಗೌಡರೇ ಸೂಚಿಸುವವರು ಇಲ್ಲಿ ಅಭ್ಯರ್ಥಿಯಾಗುತ್ತಾರೆ ಎನ್ನುವ ಮೂಲಕ ಅಲ್ಲಿಯ ಆಯ್ಕೆ ಅಷ್ಟು ಸುಲಭವಾಗಿಲ್ಲ ಎಂದು ದಳದ ಮೂಲವೊಂದು ತಿಳಿಸಿದೆ.

ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ನಿಧನರಾಗಿರುವ ಶಾಸಕ ಎಸ್‌.ಬಸವಯ್ಯ ಅವರ ಮಗ ಎನ್‌.ಬಿ.ಸುರೇಶ್‌ ಅವರನ್ನೇ ಕಣಕ್ಕೆ ಇಳಿಸಲಾಗುವುದು ಎಂದು ಪ್ರದೇಶ ದಳ ಅಧ್ಯಕ್ಷರೂ ಆಗಿರುವ ಕೇಂದ್ರ ಸಚಿವ ಸಿ.ಎಂ.ಇಬ್ರಾಹಿಂ ಹೇಳಿರುವುದಾಗಿ ವರದಿಯಾಗಿದೆ. ಈಹಿಂದೆಶಾಸಕರಾಗಿದ್ದ ಮಾಧುಸ್ವಾಮಿ ಅವರನ್ನೇ ಪಕ್ಷದ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಬೇಕು ಎಂಬ ಒತ್ತಡ ಪಕ್ಷದ ಕಾರ್ಯಕರ್ತರ ಒಂದು ವಲಯದಿಂದ ಬಂದಿದೆ ಎನ್ನಲಾಗಿದೆ.

ಕಾರ್ಮಿಕ ಮುಖಂಡ ದತ್ತಾ ಸಾಮಂತ್‌ ಕಗ್ಗೊಲೆ

ಮುಂಬೈ, ಜ. 16 (ಪಿಟಿಐ)– ಮುಂಬೈನ ಹಿರಿಯ ಕಾರ್ಮಿಕ ನಾಯಕ ಡಾ. ದತ್ತಾ ಸಾಮಂತ್‌ ಅವರನ್ನು ಅಪರಿಚಿತರು ಇಂದು ಗುಂಡಿಕ್ಕಿ ಕೊಂದಿದ್ದಾರೆ.

ಅರವತ್ತೈದು ವರ್ಷದ ಡಾ. ಸಾಮಂತ್‌ ಇಂದು ಮಧ್ಯಾಹ್ನ 11.35ರ ವೇಳೆಗೆ ತಮ್ಮ ಮನೆಯಿಂದ ಕಾರಿನಲ್ಲಿ ತೆರಳುತ್ತಿದ್ದಾಗ ರಿಕ್ಷಾದಲ್ಲಿ ಬಂದ ಹಂತಕರು ಅವರತ್ತ ಗುಂಡು ಹಾರಿಸಿ ಪರಾರಿಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT