ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ: 18.5.1997

Last Updated 17 ಮೇ 2022, 19:45 IST
ಅಕ್ಷರ ಗಾತ್ರ

ಮಹಿಳಾ ಮೀಸಲಾತಿ: ರಾಷ್ಟ್ರೀಯ ಚರ್ಚೆಗೆ ಪ್ರಧಾನಿ ಗುಜ್ರಾಲ್‌ ಕರೆ

ನವದೆಹಲಿ, ಮೇ 17 (ಪಿಟಿಐ): ಶಾಸನಸಭೆಗಳಲ್ಲಿ ಮಹಿಳೆಯರಿಗೆ ಶೇಕಡ 33 ಮೀಸಲಾತಿ ನೀಡುವ ಕುರಿತ ಮಸೂದೆಯ ಬಗ್ಗೆ ರಾಷ್ಟ್ರ ಮಟ್ಟದಲ್ಲಿ ಚರ್ಚೆ ನಡೆಯಬೇಕಾಗಿದೆ ಎಂದು ಪ್ರಧಾನಿ ಐ.ಕೆ.ಗುಜ್ರಾಲ್‌ ಅಭಿಪ್ರಾಯಪಟ್ಟಿದ್ದಾರೆ.

ಅಗರ್‌ವಾಲ್‌ ಜನಾಂಗದ ಸಮಾವೇಶ ಉದ್ಘಾಟಿಸಿದ ಅವರು, ಇದು ದೇಶದ ಅರ್ಧ ಭಾಗದಷ್ಟು ಜನತೆಗೆ ಸಂಬಂಧಿಸಿದ್ದಾಗಿರುವು ದರಿಂದ ಈ ಮಸೂದೆ ಬಗ್ಗೆ ಸಂಸತ್ತಿನಲ್ಲಿ ಮಾತ್ರ ಚರ್ಚೆ ನಡೆದರೆ ಸಾಲದು ಎಂದರು.

ಮಹಿಳಾ ಮೀಸಲಾತಿ ಅಪಕ್ವ ವಿಚಾರ: ಅಡ್ವಾಣಿ ವಾದ

ಬೆಂಗಳೂರು, ಮೇ 17– ಜಾತಿ, ಮತ, ಕೋಮು, ಧರ್ಮ ಆಧರಿಸಿ ವಿಧಾನಸಭೆ ಹಾಗೂ ಲೋಕಸಭೆಯಲ್ಲಿ ಮಹಿಳಾ ಮೀಸ ಲಾತಿ ಕಲ್ಪಿಸುವುದನ್ನು ತಮ್ಮ ಪಕ್ಷ ಶತಾಯ ಗತಾಯ ವಿರೋಧಿಸುವುದು ಎಂದು ಬಿಜೆಪಿ ಅಧ್ಯಕ್ಷ ಎಲ್‌.ಕೆ.ಅಡ್ವಾಣಿ ಘೋಷಿಸಿದರು.

ಈ ಸಂಬಂಧದ ಮಸೂದೆ ಮಂಡನೆಗೆ ನಿನ್ನೆ ಲೋಕಸಭೆಯಲ್ಲಿ ವಿರೋಧ ವ್ಯಕ್ತವಾದ ರೀತಿಯನ್ನು ಟೀಕಿಸಿದ ಅವರು, ಮತೀಯ ಆಧಾರಿತ ಮೀಸಲಾತಿಗೆ ಒಲವು ತೋರುವ ಮೂಲಕ ಕೇಂದ್ರದ ಸಂಯುಕ್ತ ರಂಗ ಸರ್ಕಾರ ರಾಷ್ಟ್ರೀಯ ರಾಜಕಾರಣಕ್ಕೆ ಭಾರಿ ಹಾನಿಯನ್ನು ಮಾಡುತ್ತಿದೆ ಎಂದರು.

ಸಂವಿಧಾನದಲ್ಲಿ ಪರಿಶಿಷ್ಟ ಜಾತಿ–ಪಂಗ ಡಕ್ಕೆ ಮಾತ್ರ ಮೀಸಲಾತಿ ನಿಗದಿಪಡಿಸಿದ್ದರ ಹಿಂದೆ ಐತಿಹಾಸಿಕ ವಿಚಾರಧಾರೆ ಅಡಗಿದೆ. ಅದನ್ನು ಹೊಸಕಿ ಹಾಕಿ ಮತ, ಧರ್ಮಾಧರಿತ ಮೀಸಲಾತಿಗೆ ಸರ್ಕಾರ ಹೊರಟಿರುವುದು ಅಪಾಯದ ಮುನ್ಸೂಚನೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT