ಬುಧವಾರ, ಆಗಸ್ಟ್ 4, 2021
21 °C

ಪ್ರಜಾವಾಣಿಯಲ್ಲಿ 50 ವರ್ಷಗಳ ಹಿಂದೆ: ಶನಿವಾರ, 17–7–1971

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೀನಾಕ್ಕೆ ನಿಕ್ಸನ್: ‘ಶಾಂತಿ ಪ್ರವಾಸ’

ಲಾಸ ಏಂಜಲೀಸ್, ಜುಲೈ 16– ಅಮೆರಿಕದ ಅಧ್ಯಕ್ಷ ನಿಕ್ಸನ್ ಅವರು ಬರುವ ಮೇ ತಿಂಗಳೊಳಗಾಗಿ ಚೀನಾಕ್ಕೆ ಭೇಟಿ ಕೊಡಲಿದ್ದಾರೆ.

ಎರಡು ರಾಷ್ಟ್ರಗಳ ನಡುವೆ ಬಾಂಧವ್ಯವನ್ನು ಸಹಜ ಸ್ಥಿತಿಗೆ ತರಲು ಯತ್ನಿಸುವುದಕ್ಕಾಗಿ, ಚೀನಾಕ್ಕೆ ಭೇಟಿಕೊಡಲು ಆಹ್ವಾನವನ್ನು ಅಂಗೀಕರಿಸುವುದಾಗಿ ಅಧ್ಯಕ್ಷ ನಿಕ್ಸನ್ ನಿನ್ನೆ ರಾತ್ರಿ ರಾಷ್ಟ್ರವ್ಯಾಪೀ ಟೆಲಿವಿಜನ್ ಪ್ರಸಾರ ಭಾಷಣದಲ್ಲಿ ಪ್ರಕಟಿಸಿದರು. ಚೌ ಜತೆ ಮಾತುಕತೆ ನಡೆಲಿಸಲಿರುವ ಅವರು ತಮ್ಮ ಪೀಕಿಂಗ್ ಭೇಟಿ ‘ಶಾಂತಿ ಪ್ರವಾಸ’ ಆಗಲೆಂಬ ಆಶಯ ವ್ಯಕ್ತಪಡಿಸಿದರು.

ಭಾರತದ ಮೇಲೆ ಪರಿಣಾಮ ಕುರಿತು ವಿಶೇಷ ಅಧ್ಯಯನ

ನವದೆಹಲಿ, ಜುಲೈ 16– ಅಮೆರಿಕದ ಅಧ್ಯಕ್ಷ ನಿಕ್ಸನ್ ಅವರ ಪೀಕಿಂಗ್ ಭೇಟಿಯಿಂದ ಭಾರತದ ಮೇಲೆ ಆಗಬಹುದಾದ ಪರಿಣಾಮ ಕುರಿತು ಕೇಂದ್ರ ಸರ್ಕಾರ ಅಧ್ಯಯನ ಆರಂಭಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು