ರಾಜ್ಯ ಸಂಯುಕ್ತ ವಿದಾಯಕ ದಳದಿಂದ 11 ಮಂದಿ ಪಿಎಸ್‌ಪಿ ಸದಸ್ಯರ ನಿರ್ಗಮನ

ಬೆಂಗಳೂರು, ಅ. 6– ಕೆಲಕಾಲದಿಂದ ನಿರೀಕ್ಷಿಸಿದ್ದಂತೆ ರಾಜ್ಯ ವಿಧಾನಸಭೆಯ ಹನ್ನೊಂದು ಮಂದಿ ಪಿಎಸ್‌ಪಿ ಸದಸ್ಯರು ಸಂಯುಕ್ತ ವಿದಾಯಕ ದಳದಿಂದ ಹೊರಬರಲು ತೀರ್ಮಾನಿಸಿದ್ದಾರೆ.

ಲಖನೌ ವರದಿ: ಉತ್ತರ ಪ್ರದೇಶದಲ್ಲಿ ಐದು ಪಕ್ಷಗಳ ಕೂಟ ರಚಿಸುವ ಬಗ್ಗೆ ಆರಂಭವಾದ ವಿರೋಧ ಪಕ್ಷಗಳ ನಾಯಕರ, ಶಾಸಕರ ಮೂರು ದಿನಗಳ ಸಭೆಯು ಇಂದು ಯಾವ ನಿರ್ಧಾರವೂ ಇಲ್ಲದೆ ಮುಂದೂಡಲ್ಪಟ್ಟಿತು.

ಕೇಂದ್ರ ನಾಯಕರೊಂದಿಗೆ ಸಮಾಲೋಚಿಸಿದ ನಂತರ, ಉದ್ದೇಶಿತ ಸಂಯುಕ್ತ ವಿಧಾಯಕ ದಳದ ನಾಯಕತ್ವದ ಬಗ್ಗೆ ಮುಂದೆ ಸೂಕ್ತವಾದ ಕಾಲದಲ್ಲಿ ನಿರ್ಧರಿಸಲಾಗುವುದು ಎಂದು ಈ ಐದು ಪಕ್ಷಗಳ ಸಮನ್ವಯ ಸಮಿತಿಯ ವಕ್ತಾರರೊಬ್ಬರು ತಿಳಿಸಿದರು.

11 ನ್ಯಾಯಾಧೀಶರ ಸುಪ್ರೀಂ ಕೋರ್ಟಿನ ಪೂರ್ಣ ಪೀಠ ರಚನೆ

ನವದೆಹಲಿ, ಅ. 6– ಮಾಜಿ ರಾಜರನ್ನು ಅಮಾನ್ಯಗೊಳಿಸಿ ರಾಷ್ಟ್ರಪತಿ ಹೊರಡಿಸಿರುವ ಆಜ್ಞೆಯ ಕ್ರಮಬದ್ಧತೆಯನ್ನು ಪ್ರಶ್ನಿಸಿ ಎಂಟು ಜನ ಮಾಜಿ ಅರಸರು ಸಲ್ಲಿಸಿರುವ ರಿಟ್ ಅರ್ಜಿಗಳ ವಿಚಾರಣೆಗಾಗಿ ಭಾರತದ ಶ್ರೇಷ್ಠ ನ್ಯಾಯಾಧೀಶರು ಸುಪ್ರೀಂ ಕೋರ್ಟಿನ ಹನ್ನೊಂದು ಜನ ನ್ಯಾಯಾಧೀಶರನ್ನೊಳಗೊಂಡ ಪೂರ್ಣ ಪೀಠವೊಂದನ್ನು ರಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.