ನವದೆಹಲಿ, ಫೆ. 22– ಸರ್ಕಾರದ ಸಕ್ಕರೆ ನೀತಿ, ಚುನಾವಣಾ ಮತದಾರರ ಪಟ್ಟಿ ಸಿದ್ಧತೆಯಲ್ಲಿನ ಅಕ್ರಮಗಳು, ಹಕ್ಕಿನ ಮತ್ತು ಆಕ್ಷೇಪಣಾ ಪತ್ರಗಳಲ್ಲಿ ಸಂಸ್ಕೃತ ಮಿಶ್ರ ಹಿಂದಿ ಬಳಕೆ ಮುಂತಾದ ವಿಷಯಗಳು ಇಂದು ಭಾರತ ಪಾರ್ಲಿಮೆಂಟಿನಲ್ಲಿ ಚರ್ಚೆಯಾದವು.

23 ಕೋಟಿ ರೂ.ಗಳಷ್ಟು ಬೆಲೆಯ ಸಹಾಯದ್ರವ್ಯದ ಬೇಡಿಕೆಯನ್ನು ಸಭೆ ಪರಿಶೀಲಿಸಿತು. ಇದರಲ್ಲಿ 1950–51ರ ಸಾಲಿಗೆ ಬಂಡವಾಳದ ಲೆಕ್ಕದಲ್ಲಿ ಮೂರು ಕೋಟಿ ರೂ.ಗಳು ಸೇರಿವೆ.

ವ್ಯವಸಾಯ ಸಚಿವ ಕೆ.ಎಂ. ಮುನ್ಷಿಯವರು ಮಾತನಾಡುತ್ತ, ಸಕ್ಕರೆ ಕೈಗಾರಿಕೆಯನ್ನು ಹೆಚ್ಚು ಫಲವತ್ತಾದ ಪ್ರದೇಶಗಳಿಗೆ ಸಾಗಿಸದೆ ಇದ್ದರೆ ಅಥವಾ ಪ್ರತಿ ಕಾರ್ಖಾನೆಯ ಅವಶ್ಯಕತೆ ಪೂರೈಸಲು ಉತ್ತರ ಪ್ರದೇಶದ ಪಶ್ಚಿಮ ಭಾಗಗಳಲ್ಲಿ ಕಬ್ಬಿನ ಗದ್ದೆಗಳನ್ನು ಮೀಸಲಿಡದೆ ಹೋದರೆ ‘ಆ ಸಮಸ್ಯೆಗೆ ಪರಿಹಾರವೇ ಇಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.