‘ಮುಖ್ಯಮಂತ್ರಿಗಳ ಫಲಕ: ಪಾ.ಪು. ಎಚ್ಚರಿಕೆ’ ಎಂಬ ತಲೆಬರಹದ (ಪ್ರ.ವಾ. ಫೆ.9) ಸುದ್ದಿಯಲ್ಲಿ ವಿಧಾನಸೌಧದಲ್ಲಿ ಹಾಕಲಾಗಿರುವ ರಾಜ್ಯದ ಮುಖ್ಯಮಂತ್ರಿಗಳ ಫಲಕದಲ್ಲಿ ಮೊದಲ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ ಹೆಸರು ಬರೆದಿರುವುದಕ್ಕೆ ಆಕ್ಷೇಪ ಮಾಡಿರುವ ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ ಅವರು, ಕರ್ನಾಟಕದ ಮೊದಲ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ. ಹೀಗಾಗಿ ಫಲಕದಲ್ಲಿ ಹೆಸರುಗಳ ಯಾದಿ ಸರಿಪಡಿಸಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.

ಪಾ.ಪು. ಹೇಳಿರುವುದು ಸಹ ತಪ್ಪು ಎನ್ನುವುದು ನನ್ನ ಅಭಿಪ್ರಾಯ. ಏಕೆಂದರೆ ರಾಜ್ಯಕ್ಕೆ ಕರ್ನಾಟಕ ಎಂಬ ಹೆಸರು ನಾಮಕರಣವಾದದ್ದು ಡಿ.ದೇವರಾಜ ಅರಸು (೧೯೭೩) ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ. ಅಂದಮೇಲೆ ನಿಜಲಿಂಗಪ್ಪನವರ ಹೆಸರು ಹಾಕುವುದು ತಪ್ಪಾಗುತ್ತದೆ.

ಕೆ.ಸಿ.ರೆಡ್ಡಿ ಮೈಸೂರು ರಾಜ್ಯದ ಮೊದಲ ಮುಖ್ಯಮಂತ್ರಿಯಾದರೆ, ಏಕೀಕೃತ ರಾಜ್ಯಕ್ಕೆ (೧೯೫೬) ಅಂದರೆ ವಿಶಾಲ ಮೈಸೂರು ರಾಜ್ಯದ ಮೊದಲ ಮುಖ್ಯಮಂತ್ರಿ ನಿಜಲಿಂಗಪ್ಪ ಎನ್ನಬಹುದು. ಕರ್ನಾಟಕ ಎಂಬ ಹೆಸರಿನ ರಾಜ್ಯಕ್ಕೆ ಮೊದಲ ಮುಖ್ಯಮಂತ್ರಿ ದೇವರಾಜ ಅರಸು. ಆದುದರಿಂದ ಕರ್ನಾಟಕ ರಾಜ್ಯ ಮೊದಲ ಮುಖ್ಯಮಂತ್ರಿ ಅರಸು ಎಂಬುವುದೇ ಸೂಕ್ತ, ಅಲ್ಲವೇ?!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.