ನವದೆಹಲಿ: 20 ದಿನಗಳ ಬಾಹ್ಯಾಕಾಶ ಯಾನ ಪೂರ್ಣಗೊಳಿಸಿದ ಸಾಧನೆಯ ಆತ್ಮವಿಶ್ವಾಸ ತುಂಬಿದ ನಗುಮೊಗದೊಂದಿಗೆ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲ ಅವರು ಆಕ್ಸಿಯಂ -4 ಮಿಷನ್ನ ಡ್ರ್ಯಾಗನ್ ಗ್ರೇಸ್ ನೌಕೆಯಿಂದ ಮಂಗಳವಾರ ಸಂಜೆ ಹೊರಬಂದರು.

39 ವರ್ಷದ ಶುಕ್ಲಾ, ಕಮಾಂಡರ್ ಪೆಗ್ಗಿ ವಿಟ್ಸನ್ ಮತ್ತು ಮಿಷನ್ ತಜ್ಞರಾದ ಪೋಲೆಂಡ್ನ ಸ್ಲಾವೊಸ್ಜ್ ಉಜ್ನಾನ್ಸ್ಕಿ ಮತ್ತು ಹಂಗೇರಿಯ ಟಿಬೋರ್ ಕಾಪು ಅವರು ನೌಕೆಯಿಂದ ಹೊರಬರಲು ಯೋಜನೆಗೆ ನೌಕೆಯ ನೆರವು ನೀಡಿದ್ದ ಸ್ಪೇಸ್ಎಕ್ಸ್ ಸಿಬ್ಬಂದಿ ನೆರವಾದರು.
.ಬಾಹ್ಯಾಕಾಶದಿಂದ ಮರಳಿದ ಶುಭಾಂಶು ಶುಕ್ಲಾ: ಸ್ಯಾನ್ ಡಿಯಾಗೊದಲ್ಲಿ ಇಳಿದ ಕ್ಯಾಪ್ಸೂಲ್.ಶುಭಾಂಶು ಶುಕ್ಲಾ ಸಾಧನೆ ಶತಕೋಟಿ ಕನಸುಗಳಿಗೆ ಸ್ಫೂರ್ತಿ: ಪ್ರಧಾನಿ ಮೋದಿ.
ಜೂನ್ 25ರಂದು ಬಾಹ್ಯಾಕಾಶ ಯಾನ ಕೈಗೊಂಡಿದ್ದ ಈ ತಂಡ 18 ದಿನಗಳ ಕಾಲ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿದ್ದು ಸುಮಾರು 60 ಪ್ರಯೋಗಗಳನ್ನು ನಡೆಸಿದ್ದರು. ಅಲ್ಲಿಂದ ಸೋಮವಾರ ಸಂಜೆ 4:45ಕ್ಕೆ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಇವರನ್ನು ಹೊತ್ತ ನೌಕೆ ಹೊರಟಿತು.

ಭಾರತೀಯ ಕಾಲಮಾನ ಪ್ರಕಾರ ಮಂಗಳವಾರ ಮಧ್ಯಾಹ್ನ 3.01ಕ್ಕೆ ಸ್ಯಾನ್ ಡಿಯಾಗೊ ಕರಾವಳಿಯಲ್ಲಿ ಈ ನೌಕೆ ಇಳಿಯಿತು. ಶನಾನ್ ಎಂಬ ಹಡಗಿನಲ್ಲಿ ನೌಕೆಯನ್ನು ಹೇರಿಕೊಂಡ ಸಿಬ್ಬಂದಿ, ಗಗನಯಾನಿಗಳನ್ನು ಸುರಕ್ಷಿತವಾಗಿ ಹೊರಕ್ಕೆ ಹೊರಬರಲು ನೆರವಾದರು.

ಮೂರು ವಾರಗಳ ಕಾಲ ಬಾಹ್ಯಾಕಾಶದಲ್ಲಿದ್ದ ಈ ನಾಲ್ವರು ಭೂಮಿಯ ಗುರುತ್ವಾಕರ್ಷಣ ಶಕ್ತಿಗೆ ಹೊಂದಿಕೊಳ್ಳುವ ಯತ್ನದ ಭಾಗದಂತೆ ಸಣ್ಣ ಹೆಜ್ಜೆಗಳನ್ನಿಡುತ್ತಿದ್ದುದು ಕಂಡುಬಂತು. ಹಡಗಿನಿಂದ ಹೆಲಿಕಾಪ್ಟರ್ ಮೂಲಕ ಇವರನ್ನು ಕಳುಹಿಸುವ ಮೊದಲು ಗಗನಯಾನಿಗಳ ಆರೋಗ್ಯ ತಪಾಸಣೆಯನ್ನು ತಜ್ಞ ವೈದ್ಯರು ನಡೆಸಿದರು.

ಗಗನಯಾನಿಗಳು ಏಳು ದಿನಗಳ ಕಾಲ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ. ಕಕ್ಷೆಯಲ್ಲಿ ತೂಕರಹಿತವಾಗಿದ್ದ ಇವರು, ಭೂಮಿಯ ವಾತಾವರಣಕ್ಕೆ ಹೊಂದಿಕೊಳ್ಳಲು ಇದು ನೆರವಾಗಲಿದೆ ಎಂದು ಇಸ್ರೊ ಹೇಳಿದೆ.

ವೈಶಿಷ್ಟ್ಯಗಳು

* ನಾಸಾ ಹಾಗೂ ಇಸ್ರೊ ಜಂಟಿಯಾಗಿ ಐದು ಅಂಶಗಳ ಕುರಿತು ವೈಜ್ಞಾನಿಕ ಸಂಶೋಧನೆಗಳನ್ನು ಆಯೋಜಿಸಿದ್ದವು. ಅಲ್ಲದೆ ಕಕ್ಷೆಯಲ್ಲಿ ವಿಜ್ಞಾನ ತಂತ್ರಜ್ಞಾನ ಎಂಜಿನಿಯರಿಂಗ್ ಹಾಗೂ ಗಣಿತಕ್ಕೆ ಎರಡು ಪ್ರಾತ್ಯಕ್ಷಿಕೆ ಹಮ್ಮಿಕೊಂಡಿದ್ದವು

* ‘ಜಾಯ್’ ಹೆಸರಿನ ಚಿಕ್ಕ ಆಟಿಕೆ ಹಂಸವನ್ನು ಗಗನಯಾನಿಗಳು ತಮ್ಮೊಂದಿಗೆ ಒಯ್ದಿದ್ದರು. ಹಂಸ ಪ್ರತಿನಿಧಿಸುವ ಸಾಂಸ್ಕೃತಿಕ ಮಹತ್ವಕ್ಕಾಗಿ ಈ ಆಯ್ಕೆ ಮಾಡಲಾಗಿತ್ತು. ಭಾರತೀಯರು ಸರಸ್ವತಿಯನ್ನು ವಿದ್ಯೆಯ ಅಧಿದೇವತೆ ಎಂದು ಪೂಜಿಸುತ್ತಾರೆ. ಹಂಸ ಪಕ್ಷಿ ಸರಸ್ವತಿಯ ವಾಹನವಾಗಿದ್ದು ಬುದ್ಧಿವಂತಿಕೆಯನ್ನು ಸೂಚಿಸುತ್ತದೆ. ಪೋಲೆಂಡ್ ಸಂಸ್ಕೃತಿಯಲ್ಲಿ ಇದು ಪರಿಶುದ್ಧತೆ ಹಾಗೂ ಮತ್ತೆ ಪುಟಿದೇಳುವುದರ ದ್ಯೋತಕ. ಇನ್ನು ಹಂಗರಿ ಜನರ ಪಾಲಿಗೆ ಇದು ನಿಷ್ಠೆ ಹಾಗೂ ಅನುಗ್ರಹದ ಸಂಕೇತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.