ಜೊಹರ್, ಮಲೇಷ್ಯಾ : ಭಾರತ ಜೂನಿಯರ್ ಪುರುಷರ ಹಾಕಿ ತಂಡವು ಶನಿವಾರ ಸುಲ್ತಾನ್ ಆಫ್ ಜೋಹರ್ ಕಪ್ ಟೂರ್ನಿಯ ಫೈನಲ್ನಲ್ಲಿ 1–2 ಗೋಲುಗಳಿಂದ ಪ್ರಬಲ ಆಸ್ಟ್ರೇಲಿಯಾ ವಿರುದ್ಧ ಪರಾಭವಗೊಂಡು ರನ್ನರ್ಸ್ ಅಪ್ ಆಯಿತು.

ಮೂರು ಬಾರಿಯ ಚಾಂಪಿಯನ್ ಭಾರತ ತಂಡಕ್ಕೆ ಇದು ದಾಖಲೆಯ ಎಂಟನೇ ಫೈನಲ್ ಆಗಿತ್ತು. ಆರು ಪೆನಾಲ್ಟಿ ಕಾರ್ನರ್ ಅವಕಾಶಗಳನ್ನು ಕೈಚೆಲ್ಲಿದ ಭಾರತ ತಂಡವು ಟೂರ್ನಿಯಲ್ಲಿ ಎರಡನೇ ಬಾರಿ ಆಸ್ಟ್ರೇಲಿಯಾ ತಂಡಕ್ಕೆ ಮಣಿಯಿತು. ಲೀಗ್ ಹಂತದಲ್ಲಿ 2–4 ಗೋಲುಗಳಿಂದ ಆ ತಂಡಕ್ಕೆ ಸೋತಿತ್ತು.

ಪಂದ್ಯದ 13ನೇ ನಿಮಿಷದಲ್ಲಿ ಇಯಾನ್ ಗ್ರೊಬೆಲಾರ್ ಅವರು ಆಸ್ಟ್ರೇಲಿಯಾ ತಂಡಕ್ಕೆ ಮುನ್ನಡೆ ಒದಗಿಸಿದರು. ಅದಾದ ನಾಲ್ಕು ನಿಮಿಷದಲ್ಲಿ ಭಾರತದ ಅನ್ಮೋಲ್ ಎಕ್ಕಾ (17ನೇ) ಚೆಂಡನ್ನು ಗುರಿ ಸೇರಿಸಿದ್ದರಿಂದ, ಉಭಯ ತಂಡಗಳ ಸ್ಕೋರ್ ಸಮನಾಯಿತು. ಪಂದ್ಯ ಮುಗಿಯಲು ಒಂದು ನಿಮಿಷ ಬಾಕಿ ಇರುವಂತೆ ಗ್ರೊಬೆಲಾರ್ (59ನೇ) ಗೆಲುವಿನ ಗೋಲು ದಾಖಲಿಸಿದರು.

ಟೂರ್ನಿಯಲ್ಲಿ ಆಸ್ಟ್ರೇಲಿಯಾ ತಂಡವು ನಾಲ್ಕನೇ ಬಾರಿ ಚಾಂಪಿಯನ್ ಆಯಿತು. ಭಾರತ ತಂಡವು ಐದನೇ ಬಾರಿ ಬೆಳ್ಳಿ ಪದಕ ಗೆದ್ದುಕೊಂಡಿತು. ಕಳೆದ ಎರಡು ಆವೃತ್ತಿಗಳಲ್ಲಿ ಭಾರತ ಕಂಚಿನ ಪದಕಗಳನ್ನು ಗೆದ್ದುಕೊಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.