ದಿನ ಭವಿಷ್ಯ | ಈ ರಾಶಿಯವರು ಶತ್ರುಗಳ ಬಲೆಗೆ ಬೀಳದಂತೆ ಎಚ್ಚರವಹಿಸಿ
Published 17 ಅಕ್ಟೋಬರ್ 2025, 21:34 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ವ್ಯಕ್ತಿತ್ವದಲ್ಲಿ ಹಾಗೂ ಧನಲಾಭದಲ್ಲಿ ಒಂದು ರೀತಿಯ ಹೊಸ ಅನುಭವ ಹಾಗೂ ಅದೃಷ್ಟವನ್ನು ಕಾಣುವಿರಿ. ಬಟ್ಟೆ ವ್ಯಾಪಾರಿಗಳಿಗೆ ಲಾಭ ಸಿಗುವುದು. ಜಲ ಮಂಡಳಿ ನೌಕರರಿಗೆ ವೇತನ ಹೆಚ್ಚಳವಾಗಲಿದೆ.
ವೃಷಭ
ವ್ಯವಹಾರ ವೃದ್ಧಿಯಾಗಿ ಸಮಸ್ಯೆಗಳು ಬಗೆ ಹರಿಯಲಿವೆ. ಲೆಕ್ಕ ಪರಿಶೋಧಕರ ಕೆಲಸದಲ್ಲಿ ತೃಪ್ತಿಯಿದೆ. ಸ್ವತ್ತು ವಿವಾದ ರಾಜಿ ಸಂಧಾನದ ಮೂಲಕ ಬಗೆಹರಿಯಲಿದೆ. ಕಾರ್ಯಕ್ಷೇತ್ರದಲ್ಲಿ ಒಳ್ಳೆಯ ಅವಕಾಶ ಸಿಗಲಿದೆ.
ಮಿಥುನ
ಸೃಜನಶೀಲತೆಯನ್ನು ಪ್ರದರ್ಶಿಸಲು ಬೇಕಾದಷ್ಟು ಅವಕಾಶಗಳು ಒದಗಿ ಬರಲಿವೆ. ಮಾನಸಿಕ ಸ್ಥೈರ್ಯ ದೃಢವಾಗಿದೆ. ಹಲವು ಕಾರಣಗಳಿಗೆ ಸ್ನೇಹಿತರ ಮಾರ್ಗದರ್ಶನ, ಬೆಂಬಲವನ್ನು ಅಪೇಕ್ಷಿಸುವಂತಾಗುವುದು.
ಕರ್ಕಾಟಕ
ವ್ಯವಹಾರಗಳಲ್ಲಿ ಈ ದಿನ ಹಿಡಿತವನ್ನು ಸಾಧಿಸಲಿದ್ದೀರಿ. ಮನೆಯ ರಿಪೇರಿ ಕೆಲಸಗಳಿಗೆ ಹಣ ವ್ಯಯವಾಗುತ್ತದೆ. ಹಿರಿಯರ ಆಶೀರ್ವಾದ ಪಡೆದು ಕೆಲಸ ಆರಂಭಿಸಿದಲ್ಲಿ ಜಯ ನಿಮ್ಮದೇ ಆಗಿರುತ್ತದೆ.
ಸಿಂಹ
ಕೌಟುಂಬಿಕ ವಿಷಯಗಳಲ್ಲಿ ಬಹಳ ಖುಷಿ ಸಿಗುವುದು. ಪ್ರೀತಿ ಪಾತ್ರರೊಂದಿಗೆ ಹೊಸ ಯೋಜನೆಯನ್ನು ಆರಂಭಿಸುವ ಬಗ್ಗೆ ಚರ್ಚೆ ನಡೆಸುವಿರಿ. ನಿರ್ಣಯ ಕೈಗೊಳ್ಳುವ ಸಮಯದಲ್ಲಿ ಸಹನೆಯಿಂದ ಇರಿ.
ಕನ್ಯಾ
ಆರ್ಥಿಕ ಸಮಸ್ಯೆ ಎದುರಾಗಿ ಸಹೋದರರ ಅಥವಾ ಸಂಬಂಧಿಕರ ಸಹಾಯ ಕೇಳುವುದು ಅನಿವಾರ್ಯ. ಸೋದರ ಮಾವನ ಮಾತನ್ನು ಕೇಳಿ. ದೇಹದಲ್ಲಿನ ಅಧಿಕ ಉಷ್ಣಾಂಶದಿಂದ ದಂತವ್ಯಾಧಿ ಸಂಭವಿಸಬಹುದು.
ತುಲಾ
ನಿಮ್ಮೊಳಗಿನ ಶಕ್ತಿ ಪ್ರಕಾಶಿಸಲಿದೆ. ಅಪರೂಪದ ಸಮಾರಂಭಕ್ಕೆ ಆಹ್ವಾನ ಬರುವುದು. ಹಾಲು ಮಾರಾಟಗಾರರಿಗೆ ಲಾಭವಿದೆ. ಹೊಸದಾಗಿ ಹಣ ಹೂಡಿಕೆ ಮಾಡಬೇಕಾದರೆ ಪರಿಶೀಲನೆ ಅಗತ್ಯ.
ವೃಶ್ಚಿಕ
ನಂಬಿಕಸ್ಥರಿಂದ ಮೋಸದ ಕೃತ್ಯಗಳು ನಡೆಯುವ ಸಂದರ್ಭಗಳಿವೆ. ವ್ಯವಹಾರಗಳ ಬಗ್ಗೆ ಗಮನ ಹರಿಸುವುದು ಮುಖ್ಯವಾಗಿದೆ. ಶತ್ರುಗಳ ಬಲೆಗೆ ಬೀಳದಂತೆ ಎಚ್ಚರವಹಿಸಬೇಕು.
ಧನು
ವೃತ್ತಿ ಬದಲಾವಣೆಯ ಸಮಸ್ಯೆ ನಿವಾರಣೆಯಾಗುವುದು. ಬಂಗಾರದ ಮೇಲಿನ ಧನ ಹೂಡಿಕೆಯಲ್ಲಿ ಲಾಭವಿದೆ. ಬಾಲ ಕಲಾವಿದರಿಗೆ ಉತ್ತಮ ಹೆಸರು ಬರಲಿದೆ. ದ್ವಿಚಕ್ರ ವಾಹನಗಳ ಮಾರಾಟಗಾರರಿಗೆ ಉತ್ತಮ ವಹಿವಾಟು.
ಮಕರ
ಚರ್ಚೆ ಹಾಗೂ ವ್ಯವಹಾರಗಳಲ್ಲಿ ಬಹಳ ಜಾಗರೂಕತೆಯನ್ನು ವಹಿಸಿ. ಯಂತ್ರಗಳ ಕೆಲಸ ಮಾಡುವಾಗ ಜಾಗರೂಕರಾಗಿರಿ. ಕುಟುಂಬದ ವ್ಯಕ್ತಿಗಳನ್ನು ಬಿಟ್ಟು ಹೋಗುವುದು ಮನಸ್ತಾಪಗಳಿಗೆ ಕಾರಣವಾಗಬಹುದು.
ಕುಂಭ
ಉತ್ತಮರ ಅಥವಾ ಸಾಧನೆ ಮಾಡಿರುವವರ ಸಹವಾಸ ಮಾಡುವುದು ಅಭಿವೃದ್ಧಿಗೆ ಸಹಾಯವಾಗುತ್ತದೆ. ಸಕಲ ವಿಘ್ನ, ವಿಪತ್ತುಗಳನ್ನು ಕಳೆದುಕೊಂಡು ಕಾರ್ಯಸಾಧನೆಗಾಗಿ ಮಹಾಗಣಪತಿಯನ್ನು ಪ್ರಾರ್ಥಿಸಿ.
ಮೀನ
ಮನೆಯಲ್ಲಿನ ಸಂತೋಷವು ಅನಿರೀಕ್ಷಿತ ಭೇಟಿಯಿಂದ ಇಮ್ಮಡಿಯಾಗುತ್ತದೆ. ಪುಷ್ಪವಿನ್ಯಾಸಕರ ಅಪರೂಪದ ಪುಷ್ಪ ಸಂಯೋಜನೆಯು ಪ್ರಸಿದ್ಧಿ ಯನ್ನು ಗಳಿಸುವುದು. ಚರ್ಮ ಸಂಬಂಧಿ ತೊಂದರೆಗಳು ಪೀಡಿಸಬಹುದು.