ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲೆಡೆ ಆಧಾರ್‌ ಕಾರ್ಡ್‌ ಏಕೆ?

Last Updated 9 ಮಾರ್ಚ್ 2020, 19:45 IST
ಅಕ್ಷರ ಗಾತ್ರ

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಮಂಡ್ಯದಲ್ಲಿ ನಡೆದ ಸಮಾವೇಶದಲ್ಲಿ ಪಾಲ್ಗೊಂಡು ಸಂಜೆ ಬೆಂಗಳೂರಿಗೆ ಹೊರಟೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯವರು ನೀಡಿರುವ ಹಿರಿಯ ನಾಗರಿಕರ ಗುರುತಿನ ಚೀಟಿಯನ್ನು ತೋರಿಸಿ ಟಿಕೆಟ್ ಕೇಳಿದೆ. ಗುರುತಿನ ಚೀಟಿಯನ್ನು ಹಿಂದೆ ಮುಂದೆ ತಿರುಗಿಸಿ ನೋಡಿದ ನಿರ್ವಾಹಕರು ‘ಇದರಲ್ಲಿ ಹುಟ್ಟಿದ ದಿನಾಂಕ ಎಲ್ಲಿ ಬರೆದಿದ್ದೀರಿ?

ಹಿರಿಯ ನಾಗರಿಕರು ಎಂದು ಸೀಲ್ ಹಾಕಿಸಿಕೊಂಡು ಬಂದರೆ ಆಗಿಹೋಯಿತೇ? ಆಧಾರ್ ಕಾರ್ಡ್ ತೋರಿಸಿ’ ಎಂದು ಕೇಳಿದರು. ನಾನು ಆಧಾರ್ ಕಾರ್ಡ್‌ ಇಟ್ಟುಕೊಂಡಿರಲಿಲ್ಲ. ಮತ್ತೆ ಪ್ರಶ್ನೆ ಮಾಡದೆ ರಿಯಾಯಿತಿ ದರದಲ್ಲಿ ಟಿಕೆಟ್ ಏನೋ ಕೊಟ್ಟರು. ನಂತರ ನಾನು ಕಾರ್ಡನ್ನು ಪರಿಶೀಲಿಸಿದೆ. ಅದರಲ್ಲಿ ನನ್ನ ವಯಸ್ಸು ನಮೂದಾಗಿತ್ತು.

ಹಿರಿಯ ನಾಗರಿಕರ ಗುರುತಿನ ಚೀಟಿಯನ್ನು ಸಾರಿಗೆ ಸಂಸ್ಥೆಯವರು ಕಣ್ಣುಮುಚ್ಚಿಕೊಂಡೇನೂ ಕೊಡುವುದಿಲ್ಲ. ನಮ್ಮ ದಾಖಲೆಯನ್ನು ಪರಿಶೀಲಿಸಿಯೇ ಸೀಲ್ ಹಾಕಿ ಕೊಟ್ಟಿರುತ್ತಾರೆ. ಇದು ನಿರ್ವಾಹಕರಿಗೆ ತಿಳಿಯದ ವಿಷಯವೇ? ಎಲ್ಲೆಡೆ ಆಧಾರ್ ಕಾರ್ಡ್‌ ಕೇಳುವುದು ಈಗ ಒಂದು ಚಟವಾಗಿಬಿಟ್ಟಿದೆ. ಇದೀಗ ಬಸ್‌ಗಳಲ್ಲೂ ಇದು ಆರಂಭವಾಗಿರುವುದು ಅಚ್ಚರಿದಾಯಕ.

-ವಿಶಾಲಾಕ್ಷಿ ಶರ್ಮಾ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT