ಗುರುವಾರ , ಜನವರಿ 30, 2020
19 °C

ಆ್ಯಸಿಡ್‌ ಮಾರಾಟ: ಎಡವುತ್ತಿರುವುದು ಎಲ್ಲಿ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆ್ಯಸಿಡ್‌ ಅನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದಕ್ಕೆ ನಿರ್ಬಂಧವಿದ್ದರೂ
ಇಂದಿಗೂ ಅಂಗಡಿಗಳಲ್ಲಿ ಅದು ಸುಲಭವಾಗಿ ಸಿಗುತ್ತಿರುವುದು (ಪ್ರ.ವಾ., ಜ. 14) ಗಂಭೀರವಾದ ವಿಷಯ. ಆ್ಯಸಿಡ್‌ ಮಾರಾಟಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಹೊರಡಿಸಿರುವ ಮಾರ್ಗಸೂಚಿಗೆ ಕಿಮ್ಮತ್ತಿಲ್ಲದಂತೆ
ಕೆಲವರು ವರ್ತಿಸುತ್ತಿದ್ದಾರೆ. ಮಾನವನ ದೇಹಕ್ಕೆ ತೀವ್ರ ಹಾನಿ ಉಂಟು ಮಾಡುವ ಆ್ಯಸಿಡ್‌, ಕಿರಾಣಿ ಅಂಗಡಿಗಳಲ್ಲಿ ಮುಕ್ತವಾಗಿ ಸಿಗುತ್ತದೆ ಎಂದರೆ ಏನರ್ಥ? ನಾವು ಎಡವುತ್ತಿರುವುದು ಎಲ್ಲಿ? ಅಧಿಕಾರಿಗಳು ಜಾಣಕುರುಡರಾಗಿದ್ದಾರೆಯೇ ಅಥವಾ ನಾಗರಿಕ ಸಮಾಜ ಕುರುಡಾಗಿದೆಯೇ? ಹೀಗಾದರೆ ಸಮಾಜದ ಗತಿ ಏನು?

ಆ್ಯಸಿಡ್ ದಾಳಿ ಹಾಗೂ ಅದರ ಭೀಕರ ಪರಿಣಾಮಗಳ ಬಗ್ಗೆ ಜನಜಾಗೃತಿ ಮೂಡಿಸಬೇಕಾಗಿದೆ. ಹದಿಹರೆಯ
ದವರನ್ನು ಗಮನದಲ್ಲಿ ಇಟ್ಟುಕೊಂಡು ಶಾಲಾ ಕಾಲೇಜುಗಳು, ಆಸ್ಪತ್ರೆಗಳಲ್ಲೂ ಈ ಕುರಿತು ಪರಿಣಾಮಕಾರಿಯಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾಗಿದೆ.

ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿದವರಿಗೆ ಅಧಿಕಾರಿಗಳು ದಂಡ ಹಾಕಿ ಕೈ ತೊಳೆದು
ಕೊಳ್ಳುವುದರ ಬದಲು, ಕಠಿಣ ಕ್ರಮ ಕೈಗೊಳ್ಳಬೇಕು. ಆ್ಯಸಿಡ್‌ ಅನ್ನು ಮುಕ್ತವಾಗಿ ಮಾರಾಟ ಮಾಡುವ ಅಂಗಡಿಯ ಪರವಾನಗಿ ರದ್ದು ಮಾಡಬೇಕಾಗಿದೆ.

ಪ್ರತಿಕ್ರಿಯಿಸಿ (+)