ಶನಿವಾರ, ಮೇ 21, 2022
27 °C

ಜಾಹೀರಾತು ಸಾರುವ ಬೊಂಬೆಗಳೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಂಗನವಾಡಿ ಕಾರ್ಯಕರ್ತೆಯರಿಗೆ ಕೊಟ್ಟಿರುವ ಸಮವಸ್ತ್ರದ ಸೀರೆಯ ಅಂಚಿನುದ್ದಕ್ಕೂ ‘ಪೋಷಣ್ ಅಭಿಯಾನ್’ ಎಂದು ಸರ್ಕಾರದ ಜಾಹೀರಾತು ಮುದ್ರಿಸಿರುವುದು ನಿಜಕ್ಕೂ ಅವರಿಗೆ ಅಗೌರವ ತೋರುವ ಕೃತ್ಯ. ಗೌರವಧನಕ್ಕಾಗಿ ದುಡಿಯುತ್ತಿರುವ ಅಂಗನವಾಡಿ ಕಾರ್ಯಕರ್ತೆಯರನ್ನು ಜಾಹೀರಾತು ಸಾರುವ ಬೊಂಬೆಗಳಂತೆ ನೋಡುವುದು ಅಮಾನವೀಯ ನಡೆ. ಇದನ್ನು ಕೂಡಲೇ ರದ್ದುಗೊಳಿಸಬೇಕು. ಅಷ್ಟಕ್ಕೂ ಪ್ರಚಾರದ ಅವಶ್ಯಕತೆ ಇದ್ದರೆ, ಅವರಿಗೆ ಒಂದು ಸುಂದರವಾದ ಮುದ್ರಿತ ಬ್ಯಾಡ್ಜ್ ಅಥವಾ ಟೋಪಿಯನ್ನೊ, ಕಿಟ್ ಬ್ಯಾಗನ್ನೊ, ಕೊಡೆಯನ್ನೊ ಅಥವಾ ಅವರ ಅವರ ಶಿಬಿರದ ಟೆಂಟ್‌ಗಳಿಗೆ ಜಾಹೀರಾತನ್ನೋ ಮುದ್ರಿಸಿ ಕೊಡಬಹುದು.

-ಸತೀಶ ಎಂ.ಎಸ್. ಭಟ್ಟ, ಬೆಂಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು