ಭಾನುವಾರ, ಫೆಬ್ರವರಿ 23, 2020
19 °C

ಮೊಬೈಲ್‌ನಲ್ಲೂ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕರ್ನಾಟಕ ಲೋಕಸೇವಾ ಆಯೋಗವು ಪ್ರಥಮ ದರ್ಜೆ ಸಹಾಯಕರ (ಎಫ್‌ಡಿಎ) ಹುದ್ದೆ ಭರ್ತಿಗೆ ಆನ್‌ಲೈನ್‌ನಲ್ಲಿ ಅರ್ಜಿ ಕರೆದಿದೆ. ಈ ಅರ್ಜಿಯು ಮೊಬೈಲ್‌ನಲ್ಲಿ ಸೂಕ್ತವಾಗಿ ಓಪನ್ ಆಗುತ್ತಿಲ್ಲ. ಅಭ್ಯರ್ಥಿಯ ಅಗತ್ಯ ಡೇಟಾವನ್ನು ಅಪ್‌ಲೋಡ್ ಮಾಡಲು, ಸ್ಕ್ರೀನ್ ಅನ್ನು ಎಡ ಮತ್ತು ಬಲಕ್ಕೆ ಸರಿಸಲು ಬರುತ್ತಿಲ್ಲ.

ಇಂಟರ್‌ನೆಟ್ ಸೆಂಟರ್‌ಗಳಿಗೆ ಹೋಗಿ ನೂಕುನುಗ್ಗಲಿನಲ್ಲಿ ಸರದಿಯಲ್ಲಿ ನಿಲ್ಲುವ ಬದಲು, ಮನೆಯಲ್ಲಿಯೇ ಸುಲಭವಾಗಿ ಅರ್ಜಿ ಹಾಕಬೇಕು ಎಂದು ಅಪೇಕ್ಷಿಸುವ ಅಭ್ಯರ್ಥಿಗಳಿಗೆ ಇದರಿಂದ ಸಮಸ್ಯೆಯಾಗುತ್ತಿದೆ. ಸಂಬಂಧಿಸಿದವರು ಸಾಫ್ಟ್‌ವೇರ್ ಬದಲಿಸಿ, ಮೊಬೈಲ್‌ನಲ್ಲೂ ಅರ್ಜಿ ಭರ್ತಿ ಮಾಡುವಂತೆ ಅವಕಾಶ ಮಾಡಿ,
ಅಭ್ಯರ್ಥಿಗಳಿಗೆ ಆಗುತ್ತಿರುವ ತೊಂದರೆ  ತಪ್ಪಿಸಬೇಕು.

ಪ್ರಹ್ಲಾದ್ ವಾ. ಪತ್ತಾರ, ಯಡ್ರಾಮಿ, ಕಲಬುರ್ಗಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)