ಮೂರು ರಾಜಧಾನಿಗಳನ್ನು ಹೊಂದುವ ಆಂಧ್ರಪ್ರದೇಶ ಸರ್ಕಾರದ ಪ್ರಸ್ತಾವಕ್ಕೆ ಅಲ್ಲಿನ ರಾಜ್ಯಪಾಲರು ಒಪ್ಪಿಗೆ ನೀಡಿದ್ದಾರೆ (ಪ್ರ.ವಾ., ಆ. 1). ಇದರೊಂದಿಗೆ ಆಂಧ್ರಪ್ರದೇಶವು ಅಮರಾವತಿ, ವಿಶಾಖಪಟ್ಟಣ ಹಾಗೂ ಕರ್ನೂಲ್ ಎಂಬ ಮೂರು ರಾಜಧಾನಿಗಳನ್ನು ಹೊಂದಲಿದೆ. ಒಂದಕ್ಕಿಂತ ಹೆಚ್ಚು ರಾಜಧಾನಿಗಳನ್ನು ಹೊಂದುವುದು ಜನಸಂಖ್ಯೆ ಹಾಗೂ ಆಡಳಿತಾತ್ಮಕ ದೃಷ್ಟಿಯಿಂದ ಸರಿಯೆನ್ನಬಹುದು. ಶೀಘ್ರ ನ್ಯಾಯದಾನಕ್ಕೂ ಇದು ಅಗತ್ಯವಾಗಿ ಬೇಕಾಗಬಹುದು. ಆದರೆ ಇದರಿಂದ ಮತ್ತಷ್ಟು ಸಮಸ್ಯೆಗಳು ಕೂಡ ಹುಟ್ಟಿಕೊಳ್ಳಬಹುದು. ಪ್ರಾದೇಶಿಕತೆ ಅಥವಾ ಪ್ರತ್ಯೇಕತೆಗೆ ಇದು ಇಂಬು ನೀಡಬಹುದು. ಅದೇ ರೀತಿ, ದೇಶದ ಎಲ್ಲಾ ರಾಜ್ಯಗಳು ತಮಗೆ ಇಷ್ಟ ಬಂದ ರೀತಿಯಲ್ಲಿ ರಾಜಧಾನಿಗಳನ್ನು ಹೊಂದಲು ಮುಂದಾಗಬಹುದು. ಆದ್ದರಿಂದ ಕೇಂದ್ರ ಸರ್ಕಾರ ಈ ಬಗ್ಗೆ ರಾಷ್ಟ್ರೀಯ ನೀತಿಯೊಂದನ್ನು ರೂಪಿಸುವುದು ಅಗತ್ಯ.

- ಕೆ.ವಿ.ವಾಸು, ಮೈಸೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.