ಮಂಗಳವಾರ, ನವೆಂಬರ್ 24, 2020
26 °C

ವಾಚಕರ ವಾಣಿ: ತ್ರಿವರ್ಣ ಮಾಸ್ಕ್ ವಿತರಣೆ ಸರಿಯೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅರುಣಾಚಲ ಪ್ರದೇಶದಲ್ಲಿ ಇದೇ 16ರಿಂದ ಶಾಲೆಗಳು ಪ್ರಾರಂಭವಾಗುತ್ತಿರುವ ಸುದ್ದಿಯನ್ನು (ಪ್ರ.ವಾ., ನ. 11) ತಿಳಿದು ಸಂತೋಷವಾಯಿತು. ಆದರೆ ಅಲ್ಲಿನ ಸರ್ಕಾರ, ಕೋವಿಡ್‌ನಿಂದ ರಕ್ಷಣೆ ಪಡೆಯಲು ಹಾಗೂ ರಾಷ್ಟ್ರೀಯತೆ ಬಗ್ಗೆ ಅರಿವು ಮೂಡಿಸಲು ವಿದ್ಯಾರ್ಥಿಗಳಿಗೆ ತ್ರಿವರ್ಣದ ಮಾಸ್ಕ್‌ ವಿತರಿಸಲು ನಿರ್ಧರಿಸಿದೆ. ಇದರಿಂದಾಗುವ ಪರಿಣಾಮವನ್ನು ಸರ್ಕಾರ ಮೊದಲು ಅರಿಯಬೇಕಾಗಿದೆ. ಏಕೆಂದರೆ, ಭವ್ಯ ಭಾರತ ದೇಶವನ್ನು ಪ್ರತಿನಿಧಿಸುವ ತ್ರಿವರ್ಣ ಮಾಸ್ಕನ್ನು ಶಾಲಾ ಅವಧಿಯ ನಂತರ ಮಕ್ಕಳು ಎಲ್ಲೆಂದರಲ್ಲಿ ಬಿಸಾಡುವುದು ಸರ್ವೇ ಸಾಮಾನ್ಯ. ಇದರಿಂದ ದೇಶದ ಘನತೆ, ಗೌರವಕ್ಕೆ ಧಕ್ಕೆ ಉಂಟಾಗುತ್ತದೆ. ಹೀಗಾಗಿ ಈ ವಿಚಾರದಲ್ಲಿ ಯೋಚಿಸಿ ಮುಂದುವರಿಯುವುದು ಒಳ್ಳೆಯದು.

–ಶ್ರೀಧರ ವಾಣಿ, ಕೊಪ್ಪಳ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು