ಮಂಗಳವಾರ, ಜನವರಿ 21, 2020
29 °C

ಕಾಳ್ಗಿಚ್ಚು: ಎಚ್ಚರಿಕೆಯ ಗಂಟೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಸ್ಟ್ರೇಲಿಯಾದ ಅರಣ್ಯಗಳಲ್ಲಿ ಕಾಳ್ಗಿಚ್ಚು ಉಂಟು ಮಾಡಿರುವ ವ್ಯಾಪಕ ಜೀವಹಾನಿ ಹಾಗೂ ಪರಿಸರ ಹಾನಿಯನ್ನು ಡಾ. ಎಂ.ವೆಂಕಟಸ್ವಾಮಿ ವಿಸ್ತೃತವಾಗಿ ವಿವರಿಸಿದ್ದಾರೆ (ಸಂಗತ, ಜ. 15). ಇದು, ನಮಗೆ ಎಚ್ಚರಿಕೆಯ ಗಂಟೆ. ನಾವು ಇನ್ನಾದರೂ ಎಚ್ಚೆತ್ತು, ನಮ್ಮಲ್ಲಿರುವ ಅರಣ್ಯ ಸಂಪತ್ತಿನ ಉಳಿವಿಗಾಗಿ ಶ್ರಮಿಸಬೇಕಾಗಿದೆ. ಪ್ರತಿಯೊಬ್ಬರೂ ಪರಿಸರ ಪ್ರಜ್ಞೆಯನ್ನು ಬೆಳೆಸಿಕೊಂಡು ಮುಂದಿನ ಪೀಳಿಗೆಗೆ ಉತ್ತಮವಾದ ಪರಿಸರ ವ್ಯವಸ್ಥೆಯನ್ನು ನಿರ್ಮಿಸಿಕೊಡುವ ಕಾರ್ಯಕ್ಕೆ ಕೈಜೋಡಿಸಬೇಕಾಗಿದೆ. ಅರಣ್ಯಗಳು ಮಾನವ ಹಾಗೂ ಪ್ರಾಣಿ– ಪಕ್ಷಿ ಸಂಕುಲದ ಜೀವನಾಡಿ. ಅವುಗಳ ಉಳಿವಿಗೆ ಕೈಜೋಡಿಸಬೇಕಾದ ಕರ್ತವ್ಯ ಪ್ರತಿಯೊಬ್ಬರದೂ ಆಗಿರುತ್ತದೆ. ತಮ್ಮ ತಮ್ಮ ಹುಟ್ಟುಹಬ್ಬದ ದಿನ ಒಂದು ಸಸಿಯನ್ನು ನೆಟ್ಟು, ಪೋಷಿಸಿದರೆ ಪರಿಸರಕ್ಕೆ ಅಳಿಲು ಸೇವೆ ಸಲ್ಲಿಸಿದಂತೆ ಆಗುತ್ತದೆ.

-ವಿನಾಯಕ ಎಂ.ಎಂ., ಹಂಪಸಾಗರ, ಹಗರಿಬೊಮ್ಮನಹಳ್ಳಿ

 

ಪ್ರತಿಕ್ರಿಯಿಸಿ (+)