ಮಂಗಳವಾರ, ಜೂಲೈ 7, 2020
27 °C

ಕಾನನ ಬರಿದಾದರೆ ಜೀವನ ನಶ್ವರ

ಜಿ.ಪಿ.ಬಿರಾದಾರ Updated:

ಅಕ್ಷರ ಗಾತ್ರ : | |

ವಿಶ್ವ ಪ್ರಸಿದ್ಧ ಬಂಡೀಪುರ ರಾಷ್ಟ್ರೀಯ ಅಭಯಾರಣ್ಯವು ಬೆಂಕಿಗೆ ಆಹುತಿಯಾಗುತ್ತಿರುವುದು ವಿಷಾದನೀಯ. ಆದರೆ ವಿಜ್ಞಾನ, ತಂತ್ರಜ್ಞಾನವು ವೇಗವಾಗಿ ಮುಂದುವರಿಯುತ್ತಿರುವ ಇಂದಿನ ದಿನಮಾನಗಳಲ್ಲಿ ಬೆಂಕಿಯನ್ನು ನಂದಿಸಲು ಅತ್ಯಾಧುನಿಕ ಉಪಕರಣಗಳನ್ನು ಬಳಸದಿರುವುದು ಸರಿಯಲ್ಲ. ವಿದೇಶಗಳಲ್ಲಿ ವಿಮಾನ ಹಾಗೂ ಹೆಲಿಕಾಪ್ಟರ್ ಮೂಲಕ ಬೆಂಕಿಯನ್ನು ಕ್ಷಣಮಾತ್ರದಲ್ಲಿ ನಂದಿಸುತ್ತಾರೆ.

ಪರಿಸರ ರಕ್ಷಣೆ ತುಂಬಾ ಮುಖ್ಯ ಹಾಗೂ ಅವಶ್ಯಕ ಎಂದು ಸಾರುವ ಸರ್ಕಾರವು ವಿದೇಶಿ ಮಾದರಿಯ ತಂತ್ರಜ್ಞಾನಗಳನ್ನು ಬಳಸಲು ಮುಂದಾಗಬೇಕು. ಗಿಡಮರಗಳು ಹಾಗೂ ವನ್ಯಜೀವಿ ಸಂಪತ್ತು ಬಹು ಅಮೂಲ್ಯ ಆಸ್ತಿ. ಇವು ನಾಶವಾದರೆ ತಕ್ಷಣ ಮರಳಿ ಸಿಗುವುದಿಲ್ಲ. ಹೀಗಾಗಿ ಆಧುನಿಕ ಸಲಕರಣೆಗಳನ್ನು ಅರಣ್ಯ ಇಲಾಖೆಗೆ ಒದಗಿಸುವ ಕಾರ್ಯ ತುರ್ತಾಗಿ ಆಗಬೇಕು. ಕಾನನ ಬರಿದಾದರೆ ಜೀವನ ನಶ್ವರ  ಎಂಬುದನ್ನು ಮನಗಾಣಬೇಕು.

ಮುಳಸಾವಳಗಿ, ವಿಜಯಪುರ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು