ಶುಕ್ರವಾರ, ಅಕ್ಟೋಬರ್ 23, 2020
21 °C

ವಾಚಕರ ವಾಣಿ: ಎಚ್ಚರ ಇರಲಿ, ಅಸಡ್ಡೆ ಬೇಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೇಂದ್ರ ಸಚಿವ ಸುರೇಶ್ ಅಂಗಡಿಯವರು ಕೋವಿಡ್‌ನಿಂದಾಗಿ ನಿಧನರಾಗಿದ್ದು ಆತಂಕಕಾರಿ ಸಂಗತಿ. ಕೇಂದ್ರ ಸಚಿವರಾಗಿದ್ದೂ ದೇಶದ ಪ್ರತಿಷ್ಠಿತ ‘ಏಮ್ಸ್’ ಆಸ್ಪತ್ರೆಯಲ್ಲಿ ದಾಖಲಾಗಿದ್ದರೂ ಅವರು ಗುಣಮುಖರಾಗಲಿಲ್ಲ. ಈ ವಿಚಾರವನ್ನು ಜನಸಾಮಾನ್ಯರು ಗಂಭೀರವಾಗಿ ಪರಿಗಣಿಸಬೇಕು.  ಜನರಲ್ಲಿ ಇತ್ತೀಚೆಗೆ ಕೊರೊನಾ ವೈರಾಣು‌ ಬಗ್ಗೆ ಭಯ ಇಲ್ಲದಂತಾಗಿದೆ. ಎಲ್ಲಾ ಕಡೆ ನಿರ್ಭೀತಿಯಿಂದ ಓಡಾಡುವ ದೃಶ್ಯ ಕಾಣಸಿಗುತ್ತದೆ. ಸುರಕ್ಷತಾ ಕ್ರಮಗಳನ್ನು ಅನುಸರಿಸುತ್ತಿಲ್ಲ. ಸರ್ಕಾರ ಕೂಡಾ ಈ ವಿಚಾರದಲ್ಲಿ ಕೈ ಚೆಲ್ಲಿದಂತೆ ಕಾಣುತ್ತಿದೆ. ಇಂತಹ ಅಸಡ್ಡೆ ಒಳ್ಳೆಯದಲ್ಲ. ಮಾಸ್ಕ್ ಧರಿಸುವುದು, ಅಂತರ ಕಾಪಾಡಿಕೊಳ್ಳುವುದು ಅಗತ್ಯ ಎಂಬುದನ್ನು ಅರಿಯಬೇಕು. ಸೋಂಕಿಗೆ ಒಳಗಾಗದಂತೆ ಎಚ್ಚರ ವಹಿಸುವುದೇ ಜಾಣ ನಡೆ ಎಂಬುದನ್ನು ಸರ್ಕಾರ ಪದೇ ಪದೇ ಮನದಟ್ಟು ಮಾಡಿಸುತ್ತಲೇ ಇರಬೇಕು.

–ವಿ.ತಿಪ್ಪೇಸ್ವಾಮಿ, ಹಿರಿಯೂರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು