ಮಂಗಳವಾರ, ಜೂನ್ 22, 2021
27 °C

ವಾಚಕರ ವಾಣಿ | ಕಿಡಿಗೇಡಿಗಳ ನಡುವೆ ಸೌಹಾರ್ದ ಕಾಯ್ದವರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರಿನ ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಹಾಗೂ ಕಾವಲ್‌ ಭೈರಸಂದ್ರ ಪ್ರದೇಶದಲ್ಲಿ ಕಿಡಿಗೇಡಿಗಳು ನಡೆಸಿದ ಕೃತ್ಯ ಖಂಡನೀಯ. ಈ ಕೃತ್ಯಕ್ಕೆ ಪ್ರಚೋದನೆ ನೀಡಿದ ಪ್ರಬಲ ಶಕ್ತಿಗಳನ್ನು ಶಿಕ್ಷಿಸಿ, ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕಾದುದು ಎಲ್ಲರ ಕರ್ತವ್ಯ.

ಈ ಪುಂಡಾಟಿಕೆಯ ನಡುವೆಯೂ ಮುಸ್ಲಿಂ ಯುವಕರು ಹಿಂದೂಗಳ ದೇವಾಲಯವನ್ನು ರಕ್ಷಿಸಿರುವುದು ಶ್ಲಾಘನೀಯ. ಇಂತಹ ಕೋಮು ಸೌಹಾರ್ದವನ್ನು ಕಾಪಾಡಿದ ಮತ್ತೊಂದು ಘಟನೆ ಹೈದರಾಬಾದ್ ಪ್ರಾಂತ್ಯದಲ್ಲಿ ನಡೆದದ್ದು ನೆನಪಿಗೆ ಬರುತ್ತದೆ. ಭಾರತಕ್ಕೆ ಸ್ವಾತಂತ್ರ್ಯ ಬಂದ ಮೇಲೆ ಹೈದರಾಬಾದ್ ಸಂಸ್ಥಾನವು ಭಾರತದ ಒಕ್ಕೂಟದಲ್ಲಿ ಸೇರಲು ರಜಾಕಾರ್ ಸ್ವಯಂ ಸೇವಕರು ವಿರೋಧಿಸಿದರು. ಆ ಸಮಯದಲ್ಲಿ ಈ ರಜಾಕಾರರು ಹಿಂದೂಗಳ ಮೇಲೆ ದೌರ್ಜನ್ಯವೆಸಗಿದರು. ಆ ಸಮಯದಲ್ಲಿ ಹಿಂದೂಗಳನ್ನು ರಜಾಕಾರರ ದೌರ್ಜನ್ಯದಿಂದ ಮುಸ್ಲಿಮರು ರಕ್ಷಿಸಿದರು. ನಿಜಾಮರ ಕಾಲದಿಂದಲೂ ಹಿಂದೂ– ಮುಸ್ಲಿಮರ ಭಾವೈಕ್ಯ ಆದರ್ಶವಾಗಿದೆ.

-ಪ್ರೊ. ಶಾಶ್ವತಸ್ವಾಮಿ ಮುಕ್ಕುಂದಿಮಠ, ಸಿಂಧನೂರು

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು