ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಚಾರ ಒಪ್ಪದವರು ವಿಮರ್ಶಿಸಲಿ

Last Updated 9 ಫೆಬ್ರುವರಿ 2021, 19:31 IST
ಅಕ್ಷರ ಗಾತ್ರ

ಕೇಸೊಂದರ ನಿಮಿತ್ತ ಇತ್ತೀಚೆಗೆ ಕೋರ್ಟಿಗೆ ಹಾಜರಾಗಿ ಅಂಗರಕ್ಷಕರೊಂದಿಗೆ ಮರಳುತ್ತಿದ್ದ ಪ್ರೊ. ಕೆ.ಎಸ್.ಭಗವಾನ್ ಅವರ ಮುಖಕ್ಕೆ ಮೀರಾ ರಾಘವೇಂದ್ರ ಎಂಬ ವಕೀಲೆ ಮಸಿ ಹಚ್ಚಿ ವಿಡಿಯೊ ಮಾಡಿ ಅವರೊಂದಿಗೆ ವಾದಕ್ಕಿಳಿದದ್ದು ಒಂದು ವಿಚಿತ್ರ ಘಟನೆ. ಹಿಂದೂ ಧರ್ಮದ ಬಗ್ಗೆ ವಿಮರ್ಶಾತ್ಮಕವಾಗಿ ಮಾತನಾಡುವ ವಾತಾವರಣ ಉಳಿದಿಲ್ಲ. ಹಿಂದೆ ವಿವೇಕಾನಂದರು, ಮಹಾತ್ಮ ಗಾಂಧಿ ಮತ್ತು ಅನೇಕ ವಿದ್ವಾಂಸರು ಹಿಂದೂ ಧರ್ಮವನ್ನು ವಿಮರ್ಶಿಸಿದ್ದಾರೆ.ಪ್ರತೀ ಧರ್ಮದಲ್ಲಿಯೂ ಈ ಕಾಲಕ್ಕೆ ಒಗ್ಗದ ಅನೇಕ ವಿಚಾರಗಳಿರುತ್ತವೆ. ಅವನ್ನು ವಿಮರ್ಶಿಸಿ ತಿದ್ದಿಕೊಂಡರೆ ನಾವು ನಿಜವಾದ ಆಧುನಿಕರಾಗುತ್ತೇವೆ. ‘ಶಂಕರಾಚಾರ್ಯ ಮತ್ತು ಪ್ರತಿಗಾಮಿತನ’, ‘ಕುವೆಂಪು ಯುಗ’, ‘ಬದಲಾವಣೆ’, ‘ರಾಮಮಂದಿರ ಏಕೆ ಬೇಡ?’ ಮುಂತಾದ ಕೃತಿಗಳ ಮೂಲಕ ಭಗವಾನ್‌ ಅವರು ನಾಡಿನ ಪ್ರಜ್ಞಾವಂತರ ಗಮನಸೆಳೆದ ಲೇಖಕ. ಅವರ ವಿಚಾರಗಳನ್ನು ಒಪ್ಪದವರು ವಿಮರ್ಶಿಸಲಿ, ಟೀಕಿಸಲಿ. ಹಲ್ಲೆಗೆ ಪ್ರಯತ್ನಿಸುವುದು, ಅಪಮಾನಗೊಳಿಸಲು ಯತ್ನಿಸುವುದು ಹೇಡಿತನದ ಕೃತ್ಯ. ವಿಮರ್ಶೆಯಿಂದ ದೂರ ಇರುವವರು ಬೆಳೆಯಲಾರರು. ಏಕಸಂಸ್ಕೃತಿ ಹೇರಿಕೆಯ ವಿರುದ್ಧ ಬಹುಸಂಸ್ಕೃತಿಯ ಬರಹಗಾರರು ಎಚ್ಚರಗೊಳ್ಳುವ ಅಗತ್ಯವಿದೆ.

- ಅಲ್ಲಮಪ್ರಭು ಬೆಟ್ಟದೂರು, ಎಚ್.ಎಸ್.ಪಾಟೀಲ, ಬಸವರಾಜ ಆಕಳವಾಡಿ, ಶಾಂತಾದೇವಿ ಹಿರೇಮಠ, ಡಿ.ಎಚ್.ಪೂಜಾರ, ವಿಠ್ಠಪ್ಪ ಗೋರಂಟ್ಲಿ, ಎ.ಎಂ.ಮದರಿ, ಖಾಸಿಂ ಸಾಹೇಬ, ಈಶ್ವರ ಹತ್ತಿ, ಡಾ. ವಿ.ಬಿ.ರಡ್ಡೇರ, ವಿಜಯ ಅಮೃತರಾಜ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT