ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಕೆ ತೀರಿಸಲು ಅವಸರವೇನಿತ್ತು?

ಅಕ್ಷರ ಗಾತ್ರ

ಮುಖ್ಯಮಂತ್ರಿಯವರ ಪುತ್ರ ಹಾಗೂ ಬಿಜೆಪಿ ಮುಖಂಡ ಬಿ.ವೈ.ವಿಜಯೇಂದ್ರ ಅವರು ಲಾಕ್‌ಡೌನ್‌ ನಡುವೆಯೂ ನಂಜನಗೂಡಿನ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿರುವ ಸುದ್ದಿ (ಪ್ರ.ವಾ., ಮೇ 19) ಓದಿ ದಿಗ್ಭ್ರಮೆಯಾಯಿತು. ಕೋವಿಡ್‌ ರೋಗ ತಾಂಡವವಾಡುತ್ತಿರುವ ಈ ಸಮಯದಲ್ಲಿ ಅಂತರಜಿಲ್ಲಾ ಓಡಾಟ ಮತ್ತು ಭಕ್ತರಿಗೆ ದೇವಾಲಯ ಪ್ರವೇಶ ನಿರ್ಬಂಧ ಇದೆ. ಹೀಗಿದ್ದರೂ ವಿಜಯೇಂದ್ರ ಅವರು ಕೋವಿಡ್-19 ಮಾರ್ಗಸೂಚಿಗಳನ್ನು ಉಲ್ಲಂಘಿಸಿ, ಹರಕೆ ತೀರಿಸುವ ಸಲುವಾಗಿ ಕುಟುಂಬ ಸಮೇತ ಗರ್ಭಗುಡಿಯಲ್ಲಿ ಕುಳಿತು ಪೂಜೆ ಸಲ್ಲಿಸಿದ್ದಾರೆ. ಆರೋಗ್ಯ ತುರ್ತು ಸಂದರ್ಭದಲ್ಲಿ ಮಾತ್ರ ಅಂತರಜಿಲ್ಲಾ ಓಡಾಟಕ್ಕೆ ಅನುಮತಿ ಇದೆಯೇ ವಿನಾ ಹರಕೆ ತೀರಿಸಲು ಅಲ್ಲ ಎಂಬ ಅರಿವು ಅವರಿಗೆ ಇದ್ದಂತಿಲ್ಲ. ಇದಕ್ಕೆ ಅನುವು ಮಾಡಿಕೊಟ್ಟ ಅಧಿಕಾರಿಗಳಿಗೆ ಇದು ತಿಳಿದಿರಲಿಲ್ಲವೇ? ಹರಕೆ ತೀರಿಸಲು ಮುಖ್ಯಮಂತ್ರಿಯವರ ಕುಟುಂಬಕ್ಕೆ ಅಷ್ಟೊಂದು ಅವಸರ ಇತ್ತೇ?

ಹೀಗೆ ದೇವಾಲಯ ಸುತ್ತುವ ಬದಲು ಯಾವುದಾದರೂ ಆಸ್ಪತ್ರೆಯ ಕೋವಿಡ್ ವಾರ್ಡಿಗೆ ಹೋಗಿ ಈಗಿನ ಅವ್ಯವಸ್ಥೆಯನ್ನು ಸರಿಪಡಿಸಲು ಕೈ ಜೋಡಿಸಿದ್ದಿದ್ದರೆ ಜನ ಮೆಚ್ಚುತ್ತಿದ್ದರು. ಆದರ್ಶವಾಗಿ ಇರಬೇಕಾದವರೇ ಹೀಗಾದರೆ ಪ್ರಜೆಗಳನ್ನು ಆ ಹರಕೆಪ್ರಿಯ ನಂಜುಂಡೇಶ್ವರನೇ ಕಾಪಾಡಬೇಕು.

– ವಿ.ತಿಪ್ಪೇಸ್ವಾಮಿ,ಹಿರಿಯೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT