ಶನಿವಾರ, ಮೇ 21, 2022
19 °C

ಮೀಸಲಾತಿ: ಪರಾಮರ್ಶೆ ನಡೆಯಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೀಸಲಾತಿ ಹಾಗೂ ಪ್ರಾತಿನಿಧ್ಯದ ಹೆಸರಿನಲ್ಲಿ ಇಂದು ಬೇಡಿಕೆ ಸಲ್ಲಿಸುತ್ತಿರುವ ಸಮುದಾಯಗಳ ಸಂಖ್ಯೆ ಗಣನೀಯವಾಗಿ ಏರುತ್ತಲೇ ಇದೆ. ಮಹಾರಾಷ್ಟ್ರದಲ್ಲಿ ಮರಾಠಿಗರು, ಗುಜರಾತಿನಲ್ಲಿ ಪಟೇಲರು, ಕರ್ನಾಟಕದಲ್ಲಿ ಲಿಂಗಾಯತ ಪಂಚಮಸಾಲಿ, ಕುರುಬರು ಹಾಗೂ ಒಕ್ಕಲಿಗರು... ಹೀಗೆ ಅನೇಕ ಕಡೆ ಮೀಸಲಾತಿ ಬೇಡಿಕೆಯ ಕೂಗು ಕೇಳಿಬರುತ್ತಿದೆ. ಈ ಮೀಸಲಾತಿ ಎಂಬುದು ರಾಜಕೀಯ ದಾಳವಾಗಿ ಬಳಕೆಯಾಗಿ, ಮುಂದೊಂದು ದಿನ ಇದೇ ಪಿಡುಗಾಗಿ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡಿದರೂ ಆಶ್ಚರ್ಯವಿಲ್ಲ. ಹಾಗೆ ಆಗುವ ಮುನ್ನವೇ ಎಚ್ಚೆತ್ತುಕೊಂಡು, ಮೀಸಲಾತಿಯ ಅಗತ್ಯದ ಬಗ್ಗೆ ಪರಿಶೀಲನೆ, ಪರಾಮರ್ಶೆ ಹಾಗೂ ಪುನರಾವಲೋಕನ ಮಾಡಿಕೊಳ್ಳಲು ಕಾಲ ಪಕ್ವವಾಗಿದೆ.

- ಮಹೇಶ್ ಸಿ.ಎಚ್., ಶಿವಮೊಗ್ಗ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು