ಸೋಮವಾರ, ಜನವರಿ 24, 2022
29 °C

ವಾಚಕರವಾಣಿ: ರಿಯಾಲಿಟಿ ಷೋ, ಎಳೆಯರನ್ನು ಕೈಬಿಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಿರುತೆರೆ ಬಾಲಪ್ರತಿಭೆ ಸಮನ್ವಿ ದುರಂತ ಸಾವಿಗೀಡಾಗಿದ್ದು ಅತೀವ ಸಂಕಟ ತರಿಸಿತು. ಹೆತ್ತವರ ಯಾತನೆಯು ಪದಗಳನ್ನು ಮೀರಿದ್ದು. ಆದಷ್ಟು ಶೀಘ್ರ ಅವರು ಆಘಾತದಿಂದ ಹೊರಬರಲಿ. ಸಾವು ಹೇಳಿ ಕೇಳಿ ಬಾರದಾದರೂ ನಮ್ಮ ಎಚ್ಚರಿಕೆ ನಮಗಿರಬೇಕು. ತಮ್ಮ ಮಕ್ಕಳನ್ನು ವಾಹನಗಳಲ್ಲಿ ಕರೆದೊಯ್ಯುವಾಗಲಂತೂ ಪೋಷಕರಿಗೆ ಮೈಯೆಲ್ಲ ಕಣ್ಣಾಗಿರಬೇಕು. ಎಳೆಯ ಕಂದಮ್ಮಗಳನ್ನು ದೂರದರ್ಶನದ ರಿಯಾಲಿಟಿ ಷೋಗಳಲ್ಲಿ ತಾನೆ ಏಕೆ ಭಾಗಿಗಳನ್ನಾಗಿಸಬೇಕು? ಈಗಾಗಲೇ ಅವರು ಅನುಭವಿಸುತ್ತಿರುವ ಒತ್ತಡ ಸಾಲದೇ? ತಮ್ಮ ಮಕ್ಕಳಿಗೆ ಚಿತ್ರ ವಿಚಿತ್ರ ವೇಷ ತೊಡಿಸಿ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡುವುದಿದೆ. ಮಕ್ಕಳಿಗೆ ತಾವು ಏನನ್ನು ತೊಟ್ಟಿದ್ದೇವೆಂಬ ಅರಿವು ಇರದು. ಅವರಿಗೆ ಅದು ಅಸಹನೀಯ ಹೊರೆಯೇ ಹೌದು. ಮಕ್ಕಳಿಗೆ ಸಹಜ ದಿರಿಸುಗಳೇ ಸಾಕು ಮಿಂಚಲು. ಒಂದೊಂದು ಮಗುವೂ ಶ್ರೇಷ್ಠ, ವಿಶಿಷ್ಟ. ಅದು ಯಾರೊಂದಿಗೂ ಸ್ಪರ್ಧೆಗಿಳಿಯುವ ಅಗತ್ಯವೇ ಕಾಣದು.

ಬಿಂಡಿಗನವಿಲೆ ಭಗವಾನ್, ಬೆಂಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.