ಕೋವಿಡ್– 19ರಿಂದ ಶೈಕ್ಷಣಿಕ ವ್ಯವಸ್ಥೆ ಮೇಲೆ ಉಂಟಾಗಿದ್ದ ಅಡೆತಡೆಗಳಿಂದ ಹೊರಬಂದು ಕಾಲೇಜುಗಳನ್ನು ನವೆಂಬರ್ 17ರಿಂದ ಪುನರಾರಂಭಿಸಲು ಸರ್ಕಾರ ತೆಗೆದುಕೊಂಡಿರುವ ನಿರ್ಧಾರ ಸ್ವಾಗತಾರ್ಹ. ಆದರೆ ತರಗತಿ ಪ್ರಾರಂಭದ ನಡುವೆ ಆನ್ಲೈನ್ ಅಥವಾ ಆಫ್ಲೈನ್ ತರಗತಿಯ ಆಯ್ಕೆಯನ್ನು ವಿದ್ಯಾರ್ಥಿಗಳ ವಿವೇಚನೆಗೆ ಬಿಡುವುದು ಸಮಂಜಸವಲ್ಲ. ಈಗಾಗಲೇ ವಿದ್ಯಾರ್ಥಿಗಳು ತರಗತಿಯಿಂದ ದೂರ ಉಳಿದು ಮಾನಸಿಕವಾಗಿ ಹಿಂಸೆ ಅನುಭವಿಸಿದ್ದಾರೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಂತೂ ಆನ್ಲೈನ್ ತರಗತಿಗಳಿಂದ ವಿಪರೀತ ಕಷ್ಟ ಅನುಭವಿಸಿದ್ದಾರೆ.

ಮುಂದೆಯೂ ಆನ್ಲೈನ್ ತರಗತಿಗಳು ಮುಂದುವರಿದರೆ ಅವರು ತರಗತಿಗಳಿಂದ ಇನ್ನೂ ದೂರ ಉಳಿದುಬಿಡಬಹುದು. ತರಗತಿ ಪ್ರಾರಂಭಿಸಲು ನಿರ್ಧರಿಸಿದ ಮೇಲೂ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಆನ್ಲೈನ್, ಆಫ್ಲೈನ್ ಎಂಬ ದ್ವಂದ್ವವನ್ನು ಸೃಷ್ಟಿಸಿರುವುದು ಯಾಕೆ? ಒಂದೋ ಆನ್ಲೈನ್ನಲ್ಲಿ ತರಗತಿ ಮುಂದುವರಿಸಲಿ, ಇಲ್ಲವೇ ಶೈಕ್ಷಣಿಕ ಸಂಸ್ಥೆಗಳಲ್ಲಿ ತರಗತಿ ನಡೆಸುವಂತಾಗಲಿ.

ವಿಜಯಕುಮಾರ್ ಎಸ್. ಸುಜ್ಜಲೂರು,ಟಿ.ನರಸೀಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.