ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀಲಕಂಠೇಶ್ವರ ದೇವಸ್ಥಾನದ ಬೆಳ್ಳಿ ಮಹೋತ್ಸವ

Last Updated 2 ಫೆಬ್ರುವರಿ 2018, 9:55 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ಶಿಗ್ಲಿಯ ವೀರಶೈವ ಕುರುಹಿನ ಶೆಟ್ಟಿ ಸಮಾಜದ ನೀಲಕಂಠೇಶ್ವರ ದೇವಸ್ಥಾನದ ಬೆಳ್ಳಿ ಮಹೋತ್ಸವ ಫೆ.2ರಂದು ನಡೆಯಲಿದೆ. ಫೆ.2ರಂದು ದೇವಸ್ಥಾನದ ಬೆಳ್ಳಿ ಮಹೋತ್ಸವ ಹಳೇ ಹುಬ್ಬಳ್ಳಿಯ ವೀರಭಿಕ್ಷಾವರ್ತಿ ಮಠದ ಪಟ್ಟಾಧ್ಯಕ್ಷರಾದ ಶಿವಶಂಕರ ಶಿವಾಚಾರ್ಯ ಸ್ವಾಮಿಗಳ ಸಾನ್ನಿಧ್ಯದಲ್ಲಿ ನಡೆಯಲಿದೆ.

ಬೆಳಿಗ್ಗೆ ಪುರಪ್ರವೇಶ ಮಾಡುವ ಸ್ವಾಮೀಜಿ ಅವರನ್ನು ಸಾರೋಟ ಮೂಲಕ ಮೆರವಣಿಗೆ ಮಾಡಲಾಗುವುದು. ನಂತರ ವೀರಣ್ಣ ಪವಾಡದ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯುವುದು. ಯತೀಶ್ವರಾನಂದ ಸ್ವಾಮೀಜಿ, ಇಷ್ಟಲಿಂಗ ಸ್ವಾಮೀಜಿ, ಮಲ್ಲಿಕಾರ್ಜುನ ರೋಣ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಹಿನ್ನೆಲೆ: 1989ರ ಫೆ.12ರಂದು ಶಿಗ್ಲಿ ಯಲ್ಲಿ ಕುರುಹಿನಶೆಟ್ಟಿ ಸಮಾಜ ಅಸ್ತಿತ್ವಕ್ಕೆ ಬಂದಿತು. ಅದರ ಬೆನ್ನಲ್ಲೇ, ಗ್ರಾಮದಲ್ಲಿ ಒಂದು ದೇವಸ್ಥಾನ ಕಟ್ಟಬೇಕು ಎಂದು ನಿರ್ಧರಿಸಲಾಗಿತ್ತು. ಆದರೆ, ನೇಕಾರಿಕೆಯನ್ನೇ ನೆಚ್ಚಿದ್ದ ಸಮಾಜಕ್ಕೆ ಅದು ಕಷ್ಟವಾಗಿತ್ತು. 1965ರಲ್ಲಿ ದೇವಸ್ಥಾನಕ್ಕಾಗಿ ಜಾಗ ಖರೀದಿಸಲಾಯಿತು. ಆದರೆ, ಆರ್ಥಿಕ ತೊಂದರೆಯಿಂದ ನಿರ್ಮಾಣ ಕೆಲಸ ನನೆಗುದಿಗೆ ಬಿದ್ದಿತು.

ಅಂದು ಸಮಾಜದ ಹಿರಿಯರಾಗಿದ್ದ ದಿ.ಸೂಗೀರಪ್ಪ ನೂಲ್ವಿಯವರ ಮನೆಯಲ್ಲಿ ಸಭೆ ಸೇರಿ, ದಿ.ಫಕ್ಕೀರಪ್ಪನವರು ಅಣ್ಣಿಗೇರಿ, ದಿ.ಹಾಲಪ್ಪನವರು ಪವಾಡದ, ಅಂದಾನೆಪ್ಪನವರು ಹಲಗೋಡದ, ದಿ.ಮರೆಯಪ್ಪ ನಾವಳ್ಳಿ, ದಿ.ಗುರುಪಾದಪ್ಪ ಕೆರಿ, ಗೋಪಾಲಪ್ಪ ನವಲಗುಂದ, ದಿ.ಶಿವಪ್ಪ ಕಾತರಕಿ, ಚಂದ್ರಪ್ಪ ತವರಿ, ವೀರಪ್ಪ ಶಿರಹಟ್ಟಿ, ದಿ.ಉಳವಪ್ಪ ಬೆಳವಗಿ, ಈಶ್ವರಪ್ಪ ಮತ್ತಿಗಟ್ಟಿ, ಮಹಾದೇವಪ್ಪ ಬೆಳವಗಿ ಸೇರಿದಂತೆ ಸಮಾಜದ ಅನೇಕ ಮುಖಂಡರು ದೇವಸ್ಥಾನದ ಕಟ್ಟಡ ಕಟ್ಟಲು ಠರಾವು ಪಾಸು ಮಾಡಿದರು.

1990ರಲ್ಲಿ ದೇವಸ್ಥಾನ ನಿರ್ಮಾಣ ಕಾರ್ಯ ಆರಂಭವಾಯಿತು. 1992ರಲ್ಲಿ ಗರ್ಭಗುಡಿ ಪೂರ್ಣಗೊಂಡಿತು. ಅದೇ ವರ್ಷ ಸಮಾಜದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಅವರು ಗ್ರಾಮಕ್ಕೆ ಬಂದು ಕಟ್ಟಡ ನಿರ್ಮಾಣ ಕೆಲಸ ವೀಕ್ಷಿಸಿ ಪ್ರೋತ್ಸಾಹಿಸಿದರು. ಮುಂದಿನ 6 ತಿಂಗಳಲ್ಲಿ ಸಂಪೂರ್ಣವಾಗಿ ದೇವಸ್ಥಾನ ನಿರ್ಮಾಣಗೊಂಡಿತು.

2004ರಲ್ಲಿ ಸಮಾಜದ ತರುಣ ಸಂಘ ಅಸ್ತಿತ್ವಕ್ಕೆ ಬಂತು. 2005ರಿಂದ ಸಮಾಜದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡುವ ಪರಂಪರೆಗೆ ನಾಂದಿ ಹಾಡಲಾಯಿತು. ಗ್ರಾಮ ಪಂಚಾಯ್ತಿ ನೀಡಿದ 50x100 ಅಳತೆ ಜಾಗದಲ್ಲಿ ಸಮುದಾಯ ಭವನ ನಿರ್ಮಾಣ ಆರಂಭವಾಗಿದೆ. ಸದ್ಯ ಶಿಗ್ಲಿಯ ಕುರುಹಿನಶೆಟ್ಟಿ ಸಮಾಜದ ಗೌರವಾಧ್ಯಕ್ಷ ಪಶುಪತೆಪ್ಪ ಶಿರಹಟ್ಟಿ, ತರುಣ ಸತ್ಸಂಗ ಬಳಗದ ಅಧ್ಯಕ್ಷ ಸಿದ್ದಪ್ಪ ಹರ್ತಿ ಹಾಗೂ ನೀಲಕಂಠೇಶ್ವರ ಕ್ಷೇಮಾಭಿವೃದ್ಧಿ ಹಾಗೂ ವಿವಿಧೋದ್ದೇಶಗಳ ಸಂಸ್ಥೆಯ ಅಧ್ಯಕ್ಷ ವೀರಣ್ಣ ಪವಾಡದ, ಉಪಾಧ್ಯಕ್ಷ ವೀರೇಶ ನೂಲ್ವಿ ಉತ್ತಮ ಕಾರ್ಯ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT