ಯುವಕನ ಕೃತ್ಯ ಹೇಡಿತನದ ಸಂಕೇತ
ಭಾರತೀಯ ರಿಸರ್ವ್ ಬ್ಯಾಂಕ್‌ನ (ಆರ್‌ಬಿಐ) ನಿವೃತ್ತ ಅಧಿಕಾರಿಯೊಬ್ಬರ ಮಗ ಬೆಂಗಳೂರಿನಲ್ಲಿ ತನ್ನ ತಂದೆಯನ್ನೇ ಕೊಂದು ವಿಕೃತ ಮೆರೆದಿದ್ದಾನೆ (ಪ್ರ.ವಾ., ಡಿ. 31). ತಂದೆ ತಾನು ದುಡಿದದ್ದನ್ನು ಯಾರಿಗೋ ಕೊಡುವರೆಂಬ ಕಾರಣಕ್ಕೆ ಅವರನ್ನೇ ಕೊಲ್ಲಲು ಮುಂದಾದದ್ದು ಅವನ ದುಡಿಯಲಾರದ ಸೋಮಾರಿತನದ ಗುಣ ಮತ್ತು ಆತ್ಮಸ್ಥೈರ್ಯವಿಲ್ಲದ ಹೇಡಿತನದ ಸಂಕೇತವಾಗಿದೆ. ಹೊತ್ತು ಸಾಕಿ ಬೆಳೆಸಿದವರನ್ನು ತಮ್ಮ ಕೈಯ್ಯಾರೆ ಕೊಲ್ಲುವ ಇಂತಹ ಯುವಕರು ಹೇಗೆ ದೇಶದ ಸಂಪನ್ಮೂಲ ವ್ಯಕ್ತಿಗಳಾಗಲು ಸಾಧ್ಯ?
-ವಿಶಾಲಾ ಆರಾಧ್ಯ, ಬೆಂಗಳೂರು
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.