ಶನಿವಾರ, ಏಪ್ರಿಲ್ 17, 2021
28 °C

ನಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳೋಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಡಗು ಜಿಲ್ಲೆಯಲ್ಲಿ ನರಭಕ್ಷಕ ಹುಲಿಯನ್ನು ಹಿಡಿಯಲು ಸಾಧ್ಯವಾಗದಿದ್ದರೆ ಗುಂಡಿಕ್ಕಿ ಕೊಲ್ಲುವ ಆದೇಶವನ್ನು ಅರಣ್ಯಾಧಿಕಾರಿ ಹೊರಡಿಸಿರುವುದು ಯುಕ್ತವೇ? ವನ್ಯಮೃಗಗಳನ್ನು ಗುಂಡಿಕ್ಕಿ ಕೊಲ್ಲುತ್ತಾ ಹೋದರೆ ಮುಂದೆ ಅವುಗಳ ಸಂತತಿಯೇ ಸಂಪೂರ್ಣವಾಗಿ ನಶಿಸುವುದರಲ್ಲಿ ಅನುಮಾನವಿಲ್ಲ. ವನ್ಯಮೃಗಗಳನ್ನು ಸೆರೆಹಿಡಿಯಲು ಅಥವಾ ನಾಡಿನತ್ತ ಬಾರದಿರುವಂತೆ ಮಾಡಲು ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಯೋಜನೆ ರೂಪಿಸಬಹುದಲ್ಲವೇ? ಆಹಾರದ ಅಸಮತೋಲನದಿಂದಾಗಿ ವನ್ಯಮೃಗಗಳು ಕಾಡಿನಿಂದ ನಾಡಿನತ್ತ ಹೆಜ್ಜೆ ಹಾಕುತ್ತಿರುವುದಂತೂ ಸ್ಪಷ್ಟ. ಅದಕ್ಕೆ ಕಾರಣ ಮಾನವ ಮತ್ತು ಪ್ರಾಣಿಗಳ ನಡುವಿನ ನಿರಂತರ ಸಂಘರ್ಷ, ಅರಣ್ಯ ನಾಶ, ಗಣಿಗಾರಿಕೆ, ದುರಾಸೆ, ಪ್ರಕೃತಿ ಮೇಲಿನ ಅತಿಯಾದ ಹಸ್ತಕ್ಷೇಪ... ನಮ್ಮ ಕಡೆಯಿಂದ ಇಷ್ಟೆಲ್ಲಾ ತಪ್ಪುಗಳಿದ್ದರೂ ಸರಿಪಡಿಸಿಕೊಳ್ಳದೆ ಪ್ರಾಣಿಗಳನ್ನು ಕೊಲ್ಲುವುದು ಎಷ್ಟು ಸರಿ?

-ಮುರುಗೇಶ ಡಿ., ದಾವಣಗೆರೆ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು