ಶನಿವಾರ, ಜನವರಿ 23, 2021
23 °C

ಅಡುಗೆ ಎಣ್ಣೆ ಬೆಲೆ: ಬೇಕು ನಿಯಂತ್ರಣ

ವಾಚಕರ ವಾಣಿ Updated:

ಅಕ್ಷರ ಗಾತ್ರ : | |

ಪೆಟ್ರೋಲ್‌, ಡೀಸೆಲ್‌, ವಿದ್ಯುತ್, ಅಡುಗೆ ಅನಿಲ... ಇವುಗಳ ಬೆಲೆ ಏರಿಕೆ ಬಿಸಿಯಿಂದ ಈಗಾಗಲೇ ತತ್ತರಿಸಿರುವ ಜನಸಾಮಾನ್ಯರಿಗೆ ಅಡುಗೆ ಎಣ್ಣೆ ದರ ಏರಿಕೆ ಮತ್ತೊಂದು ಶಾಕ್ ನೀಡಿದೆ. ಈ ವರ್ಷ ಕೋವಿಡ್ ಕಾರಣದಿಂದಾಗಿ ತಾಳೆಎಣ್ಣೆ, ಸೂರ್ಯಕಾಂತಿ ಮೊದಲಾದ ಎಣ್ಣೆಗಳ ಆಮದು ಪ್ರಮಾಣದಲ್ಲಿ ಕುಸಿತವಾಗಿದೆ. ಇದಲ್ಲದೆ ನಮ್ಮ ದೇಶದಲ್ಲಿ ಈ ವರ್ಷ ಅತಿವೃಷ್ಟಿಯಿಂದ ಶೇಂಗಾ, ಸೂರ್ಯಕಾಂತಿ, ಸೋಯಾಬೀನ್, ಸಾಸಿವೆ ಮುಂತಾದ ಎಣ್ಣೆ ಬೆಳೆಗಳಿಗೆ ಹಾನಿಯಾಗಿದೆ.

ಅಡುಗೆ ಎಣ್ಣೆ ದರ ಏರಿಕೆಯು ಶ್ರೀಸಾಮಾನ್ಯ ನಾಗರಿಕರನ್ನು ಹೈರಾಣಾಗಿಸಿದ್ದು, ದರ ನಿಯಂತ್ರಿಸಲು ಆಮದು ಸುಂಕ ಕಡಿಮೆ ಮಾಡಬೇಕು. ಕಾಲಕಾಲಕ್ಕೆ ಆಮದು ಉತ್ಪನ್ನಗಳ ದರ ಏರಿದಾಗ ಅದೇ ಪ್ರಮಾಣದಲ್ಲಿ ಸುಂಕ ಕಡಿಮೆ ಮಾಡಿ ಬೆಲೆ ಸ್ಥಿರವಾಗಿರುವಂತೆ ನೋಡಿಕೊಳ್ಳಬೇಕು. ಆಮದು ಪ್ರಮಾಣ ಕಡಿಮೆಯಾಗಲು ನಮ್ಮ ದೇಶದಲ್ಲಿ ಉತ್ಪಾದನೆ ಹೆಚ್ಚಳಕ್ಕೆ ಪೂರಕವಾದ ಯೋಜನೆಗಳನ್ನು ರೂಪಿಸಬೇಕು. ಎಣ್ಣೆ ಬೆಳೆ ಬೆಳೆಯುವ ರೈತರಿಗೆ ಪ್ರೋತ್ಸಾಹಧನ, ಹೆಚ್ಚು ಇಳುವರಿಗಾಗಿ ವೈಜ್ಞಾನಿಕ ಮಾರ್ಗದರ್ಶನ, ಸಲಕರಣೆ ಒದಗಿಸಬೇಕು.

– ಉದಯ ಮ. ಯಂಡಿಗೇರಿ, ಧಾರವಾಡ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.